ಸಮಾಜ ಸೇವಕ ಕಪ್ಪಗಲ್ ಸಿ. ಮುನಿಸ್ವಾಮಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
Social worker Kappagal C. Muniswamy awarded Dada Saheb Phalke Award
ಬಳ್ಳಾರಿ 13 : ನಗರ ಮತ್ತು ಗ್ರಾಮಾಂತರದಲ್ಲಿ ಸಮಾಜ ಸೇವೆ, ಕನ್ನಡ ಹೋರಾಟ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮೂವತ್ತು ವರ್ಷದಿನಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕಪ್ಪಗಲ್ ಸಿ. ಮುನಿಸ್ವಾಮಿ ಅವರಿಗೆ ಪ್ರಸಿದ್ಧ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ.ಇಂಟರ್ ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ ಕೌನ್ಸಿಲ್ ವತಿಯಿಂದ ಮುಂಬೈನಲ್ಲಿ ನವೆಂಬರ್ 30ರಂದು ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವೆ ಕ್ಷೇತ್ರದಲ್ಲಿ ಅವರ ನೀಡಿದ ಮಹತ್ವದ ಕೊಡುಗೆಗಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುನಿಸ್ವಾಮಿ ಅವರು, “ಕನ್ನಡ, ನಾಡು, ನೀರು, ಜಲ ಹಾಗೂ ಭಾಷಾ ವಿಚಾರವಾಗಿ ನಮ್ಮ ಸಂಘಟನೆಯ ಮೂಲಕ ಹಲವು ಹೋರಾಟಗಳನ್ನು ನಡೆಸಿದ್ದೇನೆ.
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾಧ್ಯವಾದ ಮಟ್ಟಿಗೆ ನೆರವಾಗುವುದರ ಜೊತೆಗೆ ಸಾಮೂಹಿಕ ವಿವಾಹಗಳನ್ನು ಆಯೋಜಿಸಿ ಸಮಾಜ ಸೇವೆಗೆ ನನ್ನನ್ನು ಸಮರ್ಿಸಿಕೊಂಡಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಿದ ಸಂಸ್ಥೆಗೆ ಹೃತ್ಪೂರ್ವಕ ಧನ್ಯವಾದಗಳು,” ಎಂದರು.ಕಾರ್ಯಕ್ರಮದಲ್ಲಿ ಎಎಸ್ಜಿಎಸ್ ಮತ್ತು ನ್ಯಾಷನಲ್ ಅಂಡ್ ಇಂಟರ್ ನ್ಯಾಷನಲ್ ಕಲರ್ ಅಂಬಾಸಿಡರ್ ಅಧ್ಯಕ್ಷ ಡಾ. ಮಹೇಶ್ ಗೌಡ, ವಿಶ್ವನಾಥ ಜೆ. ಶೆಟ್ಟಿ ಕಲತ್ತೂರು, ಡಾ. ಬಿ.ವಿ. ಪದ್ಮಾವತಿ, ಡಾ. ಶಶಿಕಲಾ ಬಿ., ಡಾ. ಮಂಗಳಾ ಪಾಟೀಲ್, ಜಗದೀಶ್ ಎಸ್. ಪೂಜಾರಿ, ಸತೀಶ್ ಶೆಟ್ಟಿ, ಡಾ. ವಿ.ವಿ. ವಂದಿತ್, ಪ್ರವೀಣ್ ರಾವ್, ರಮೇಶ್ ಶಿವಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 