ಜಿಲ್ಲಾ ಉಪಾಧ್ಯಕ್ಷರಾಗಿ ಸಂತೋಷ ಪೂಜಾರಿ ನೇಮಕ

 ಜಿಲ್ಲಾ ಉಪಾಧ್ಯಕ್ಷರಾಗಿ ಸಂತೋಷ ಪೂಜಾರಿ ನೇಮಕ Santosh Poojary appointed as District Vice President


ವಿಜಯಪುರ 01: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯನ್ನು ಬಲಗೊಳಿಸುವ ಬಲಗೊಳಿಸುವ ಹಿನ್ನೆಲೆಯಲ್ಲಿ ಹಾಗೂ ಸಂಘಟನೆಯನ್ನು ರಾಜ್ಯಾತ್ಯಂತ ಸಕ್ರೀಯಗೊಳಿಸಲು ಮಾನ್ಯ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉದಯಭಾನು ಚಿಬ್ಬಿರವರ ನಿರ್ದೇಶನದ ಮೆರೆಗೆ ಹಗೂ ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಲು ಹಾಗೂ ಕರ್ನಾಟಕದ ಉಸ್ತುವಾರಿಗಳಾದ ನಿಗಮ್ ಭಂಡಾರಿ ಅವರ ಅನುಮೋದನೆ ಮೆರೆಗೆ ಯುವ ಕಾಂಗ್ರೆಸ ನ ರಾಜ್ಯಾಧ್ಯಕ್ಷಾರಾದ ಹೆಚ್‌.ಎಸ್‌.ಮಂಜುನಾಥ ಅವರು ಸಂತೋಷ ಪೂಜಾರಿ ಅವರನ್ನು ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಬೆಂಗಳೂರಿನ ಯುವ ಕಾಂಗ್ರೆಸ್‌ನ ರಾಜ್ಯ ಕಚೇರಿಯಲ್ಲಿ ಆದೆಶ ಪ್ರತಿ ನೀಡಿದರು.  ಈ ವೇಳೆ ಆದೇಶ ಪ್ರತಿ ನೀಡಿ ಜಿಲ್ಲೆಯ ಜವಾಬ್ದಾರಿಯನ್ನು ಹೊತ್ತುಕೊಂಡು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಹಾಗೂ ಉಸ್ತುವಾರಿಗಳು ಜಿಲ್ಲೆಯ ಎಲ್ಲಾ ಸಮಿತಿ ಹಾಗೂ ಹಿರಿಯರ ಮಾರ್ಗದರ್ಶನ ಹಾಗು ಸ್ಥಳೀಯ ನಾಯಕರ ಸಹಕಾರದೊಂದಿಗೆ ಯುವ ಕಾಂಗ್ರೆಸ್ ಸಂಘಟನೆಯನ್ನು ಬಲಗೊಳಿಸಲು ಹೆಳಿದರು  ಈ ವೇಳೆ ವಿಜಯಪುರ ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಮೋಯಿನ ಶೇಖ, ರಾಜ್ಯ ಉಪಾಧ್ಯಕ್ಷರಾದ ಅಬ್ದುಲ ದೇಸಾಯಿ ಸೇರಿದಂತೆ ಇತರರು ಇದ್ದರು.