ಕಂಬಾರಗಟ್ಟಿಯಲ್ಲಿ ನೀರು ಹಾವು ಮತ್ತು ಮೊಟ್ಟೆಗಳ ಸುರಕ್ಷಿತ ರಕ್ಷಣೆ
Safe protection of water snakes and eggs in Kambaragatti
ಮುಂಡಗೋಡ 21 : ತಾಲೂಕಿನ ಕಂಬಾರಗಟ್ಟಿಯಲ್ಲಿ ಶಿವಪ್ಪ ದುರ್ಗಪ್ಪ ಮಾದರ ಅವರ ಮನೆಯ ಪಾಯ ತೆಗೆಯುವಾಗ ದೊಡ್ಡ ಗಾತ್ರದ ನೀರು ಹಾವು ಹಾಗೂ ಸುಮಾರು 35ರಿಂದ 40 ಮೊಟ್ಟೆಗಳು ಪತ್ತೆಯಾಗಿವೆ. ಘಟನೆ ತಿಳಿದು ಅಜ್ಜಪ್ಪ ಉಪವಲಯಾಧಿಕಾರಿಗಳು ಮುಂಡಗೋಡ ಟೌನ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮುತ್ತುರಾಜ ಹಳ್ಳಿ ಗಸ್ತು ಅರಣ್ಯ ಪಾಲಕ ಹಾಗೂ ಉರಗ ರಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಹಾವು ಮತ್ತು ಮೊಟ್ಟೆಗಳನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ರಕ್ಷಿಸಿದರು. ನಂತರ ಹಾವನ್ನು ಅದರ ಸೂಕ್ತ ನೈಸರ್ಗಿಕ ಆವಾಸ ಪ್ರದೇಶಕ್ಕೆ ಬಿಡುಗಡೆ ಮಾಡಲಾಯಿತು. ಕಾರ್ಯಾಚರಣೆಯಲ್ಲಿ ನಾಗರಾಜ್ ಗುಬ್ಬಕ್ಕನವರ್ ಸೇರಿದಂತೆ ಹಾಗೂ ಸಾರ್ವಜನಿಕರು ಸಹಕರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 