ಬೇಲೆಕೇರಿಯಲ್ಲಿ ಸಮುದ್ರ ಅಲೆತಡೆಗೋಡೆ ನಿರ್ಮಿಸಲು ರೂಪಾಲಿ ಎಸ್.ನಾಯ್ಕ ಆಗ್ರಹ
Rupali S. Nayak demands construction of sea wall in Belekeri
ಬೇಲೆಕೇರಿಯಲ್ಲಿ ಸಮುದ್ರ ಅಲೆತಡೆಗೋಡೆ ನಿರ್ಮಿಸಲು ರೂಪಾಲಿ ಎಸ್.ನಾಯ್ಕ ಆಗ್ರಹ
ಕಾರವಾರ 18: ಬೇಲೆಕೇರಿಯಲ್ಲಿ ಮೀನುಗಾರಿಕಾ ಬೋಟುಗಳ ಸುರಕ್ಷಿತ ಸಂಚಾರಕ್ಕಾಗಿ ಅಲೆತಡೆಗೋಡೆ ನಿರ್ಮಿಸಲು ಶಾಸಕತ್ವ ಅವಧಿಯಲ್ಲೇ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿದ್ದೆ. ಈಗಿನ ಸರ್ಕಾರ ಅದಕ್ಕೆ ಸ್ಪಂದಿಸಿ ಅಲೆತಡೆಗೋಡೆ ನಿರ್ಮಿಸಬೇಕೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲೆತಡೆಗೋಡೆ ನಿರ್ಮಿಸುವಂತೆ ನಾನು 2021ರಲ್ಲಿ ಅಂದಿನ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರಲ್ಲಿ ವಿನಂತಿ ಮಾಡಿದ್ದರಿಂದ ಸಚಿವರು , ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸಚಿವರಾದ ಎಸ್. ಅಂಗಾರ ಅವರ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ, ಮೂಲ ಸೌಲಭ್ಯ ಅಭಿವೃದ್ಧಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಇವರು 29.06.2021ರಂದು ಕಾರವಾರ ಬಂದರು ನಿರ್ದೇಶಕರಿಗೆ ಪತ್ರ ಬರೆದು ಬೇಲೆಕೇರಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಪೂರ್ವಭಾವಿ ಅಧ್ಯಯನಕ್ಕೆ 24 ಲಕ್ಷ ರೂಪಾಯಿ ಹಾಗೂ ತಡೆಗೋಡೆ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ನಂತರ ಮೀನುಗಾರಿಕೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.ಇದಾದ ಮೇಲೆ ಮೀನುಗಾರಿಕೆ ಇಲಾಖೆ ನಿರ್ದೇಶಕರು ಆದೇಶ ಮಾಡಿ, ಬೇಲೆಕೇರಿ ಬಂದರಿನ ಸ್ಮಶಾನಭೂಮಿ ಹತ್ತಿರದಿಂದ ಅಲೆತಡೆಗೋಡೆ ವಿನ್ಯಾಸ ಮತ್ತು ತಡೆಗೋಡೆ ನಿರ್ಮಾಣದಿಂದ ಸಮುದ್ರ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಅಧ್ಯಯನಕ್ಕೆ 24 ಲಕ್ಷ ರೂ. ಅನುಮೋದನೆ ನೀಡಿದ್ದರು. ನಂತರ 2023ರಲ್ಲಿ ಸಿಡಬ್ಲ್ಯುಪಿಆರ್ ಎಸ್ ಪುಣೆ ಕಂಪನಿ ಮಾದರಿ ಅಧ್ಯಯನ ನಡೆಸಿ ಇಲ್ಲಿ ಅಲೆತಡೆಗೋಡೆ ನಿರ್ಮಿಸುವುದು ಅವಶ್ಯವಿದೆ ಎಂದು ತಿಳಿಸಿತ್ತಲ್ಲದೆ, 40 ಕೋಟಿ ರೂ.ಗಳಿಗೆ ಅಂದಾಜು ಪತ್ರಿಕೆಯನ್ನೂ ತಯಾರಿಸಲಾಗಿತ್ತು. ಇದಾದ ಮೇಲೆ ಸರ್ಕಾರ ಬದಲಾವಣೆಯಾಗಿದ್ದರಿಂದ ಯಾವುದೆ ಅಲೆತಡೆಗೋಡೆ ನಿರ್ಮಾಣದ ವಿಷಯದಲ್ಲಿ ಯಾವುದೆ ಪ್ರಗತಿಯಾಗಿಲ್ಲ. ಸರ್ಕಾರ, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಬೇಲೆಕೇರಿಯಲ್ಲಿ ಅಲೆತಡೆಗೋಡೆ ನಿರ್ಮಿಸಿ ಮೀನುಗಾರರ ಹಿತರಕ್ಷಣೆಗೆ ಮುಂದಾಗಬೇಕೆಂದು ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ. ಕೋಟ್. ಬೇಲೆಕೇರಿ ಬಂದರಿನಲ್ಲಿ ಮೀನುಗಾರಿಕಾ ಬೋಟುಗಳಿಗೆ ಅಲೆಗಳ ಹೊಡೆತದಿಂದ ತುಂಬಾ ತೊಂದರೆಯಾಗಿದೆ. ಈಚೆಗೆ ಬೇಲೆಕೇರಿಯಲ್ಲಿ ಎರಡು ಬೋಟ್ ಅವಘಡಗಳು ಆಗಿವೆ. ರಾಜ್ಯ ಸರ್ಕಾರ ಕೂಡಲೇ ಅಲೆತಡೆಗೋಡೆ ನಿರ್ಮಿಸಿ, ಮೀನುಗಾರರ ನೆರವಿಗೆ ಬರುವಂತೆ ವಿನಂತಿಸುತ್ತೇನೆ. - ರೂಪಾಲಿ ಎಸ್.ನಾಯ್ಕ.ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮಾಜಿ ಶಾಸಕರು ಕಾರವಾರ ವಿಧಾನಸಭಾ ಕ್ಷೇತ್ರ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 