ರಾಕ್ ಗಾರ್ಡನ್: ಗ್ರಾಮೀಣ ಸಾಮ್ರಾಜ್ಯದ ಅದ್ಭುತ ಪರಿಚಯ
ಲೋಕದರ್ಶನ ವರದಿ
ಶಿಗ್ಗಾವಿ12: ಇಂದಿನ ಪೀಳಿಗೆಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಸಬೇಕಾದರೆ ಒಮ್ಮೆ ' ಉತ್ಸವ ರಾಕ್ ಗಾರ್ಡನ್ಗೆ ಹೆತ್ತವರು ಕರೆದುಕೊಂಡು ಹೋಗಬೇಕು ಎಂದು ಬೆಂಗಳೂರು ನಗರ್ತ ಮಹಿಳಾ ಸಂಘಧ ಅಧ್ಯಕ್ಷೆ ಇಂದಿರಾ ಬಸವರಾಜ ಹೇಳಿದರು.
ಗೊಟಗೋಡಿಯ ರಾಕ್ ಗಾರ್ಡನ್ ಹಾಗೂ ಇಂಡಿಯನ್ ಗಾರ್ಡನ್ಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು ಇಲ್ಲಿನ ಸಹಸ್ರಾರು ಶಿಲ್ಪಗಳು ವಿಶಿಷ್ಟ ಸಂದೇಶ ನೀಡುತ್ತವೆ. ಅಲ್ಲದೇ ಗ್ರಾಮೀಣ ಸಾಮ್ರಾಜ್ಯದ ಅದ್ಭುತ ಪರಿಚಯ ನೀಡುತ್ತವೆ ಎಂದ ವಿವರಿಸಿದ ಅವರು, ಇದು ಅಕ್ಷರಶ: ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ಕೇಂದ್ರ ಎಂದು ಅಭಿಪ್ರಾಯಪಟ್ಟರು.
ರಾಕ್ ಗಾರ್ಡನ್ನ ಅನುಭವ ಸ್ಮರಣೀಯವಾದುದು ಎಂದ ಸಂಘದ ಮಾಜಿ ಅಧ್ಯಕ್ಷೆ ಶೈಲಜಾ ಉದಯಶಂಕರ್, ಇಂಡಿಯನ್ ಗಾರ್ಡನ್ನ ಸಾಹಸಮಯ ಆಟಗಳು, ಮಳೆ ಸ್ನಾನ, ಎತ್ತಿನ ಗಾಡಿ-ಟಾಂಗಾ ಸವಾರಿ,ದೋಣಿ ವಿಹಾರ ಹಾಗೂ ನೀರಿನ ಆಟಗಳು ನಮ್ಮನ್ನು ಭರಪೂರ ರಂಜಿಸಿದವು ಎಂದರು.
ಶಿಲ್ಪಗಳ ರೂಪದಲ್ಲಿರುವ ಗ್ಯಾಲರಿಗಳನ್ನು ನೋಡಿದ ನಮ್ಮ ಸದಸ್ಯರು, ಒಂದು ಕ್ಷಣ ಹೌಹಾರಿದರಲ್ಲದೆ, ಅವುಗಳನ್ನು ಮುಟ್ಟಿ ನೋಡುವ ಇಂಗಿತ ವ್ಯಕ್ತಪಡಿಸಿದರು ಎಂದು ಹೇಳಿದರು. ಇಲ್ಲಿ ಗಾಂಧೀಜಿಯವರ ಸುಭೀಕ್ಷ ಗ್ರಾಮೀಣ ಸಾಮ್ರಾಜ್ಯದ ಕನಸು ನನಸಾಗಿದೆ ಎನ್ನುವಷ್ಟರ ಮಟ್ಟಿಗೆ ಶಿಲ್ಪಗಳು ನೈಜತೆ ಹೊಂದಿವೆ ಎಂದು ಎಲ್ಲ ಸದಸ್ಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 