ಲಿಂಗಸೂಗೂರು ರೈಲು ಮಾರ್ಗ ನಿರ್ಮಾಣಕ್ಕೆ ಸಚಿವರಿಗೆ ಮನವಿ
Request to the Minister for the construction of the Lingasugur railway line
ಲಿಂಗಸೂಗೂರು ರೈಲು ಮಾರ್ಗ ನಿರ್ಮಾಣಕ್ಕೆ ಸಚಿವರಿಗೆ ಮನವಿ
ಬಳ್ಳಾರಿ 09: ರೈಲ್ವೇಕ್ರಿಯಾ ಸಮಿತಿ ಇಂದು ಬಳ್ಳಾರಿ ಸಿರುಗುಪ್ಪ ಸಿಂಧನೂರ್ ಲಿಂಗಸೂಗೂರು ನೂತನರೈಲ್ವೆ ಮಾರ್ಗದ ಕೆಲಸ ಆರಂಭಿಸಬೇಕೆಂದುರೈಲ್ವೆ ಮಂತ್ರಿ ವಿ. ಸೋಮಣ್ಣಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದೆ.ತುಮಕೂರು ರಾಯದುರ್ಗ ಬಳ್ಳಾರಿ ರೈಲ್ವೆ ಮಾರ್ಗದ ಕೆಲಸ ಇಷ್ಟರಲ್ಲೇ ಪೂರ್ಣಗೊಳ್ಳಲಿದ್ದು ಬಳ್ಳಾರಿ ಸಿರುಗುಪ್ಪ ಸಿಂಧನೂರು ಲಿಂಗಸೂಗುರು 150 ಕಿಲೋ ಮೀಟರ್ರೈಲ್ವೆ ಮಾರ್ಗರಚನೆಯಾದಲ್ಲಿ ಬೆಂಗಳೂರು ತುಮಕೂರು ಮಾರ್ಗದಲ್ಲಿಬಳ್ಳಾರಿ ರಾಯಚೂರು ಹಾಗೂ ಕಲ್ಬರ್ಗಿಗೆ ಹೋಗಬಹುದೆಂದು. ಈ ಮಾರ್ಗದಲ್ಲಿ ಭತ್ತದ ಸಾಗಾಣಿಕೆಜೊತೆಗೆ ಬಳ್ಳಾರಿಯ ಅಧಿರು ಸಾಗಾಣಿಕೆ ಮೂಲಕ ಹೆಚ್ಚಿನಆದಾಯರೈಲ್ವೆ ಇಲಾಖೆ ಬರುತ್ತದೆಎಂದು ತಿಳಿಸಲಾಯಿತು.ರೈಲ್ವೆ ಮಂತ್ರಿ ಸೋಮಣ್ಣನವರು ಮನವಿಯನ್ನು ಪರೀಶೀಲಿಸುವುದಾಗಿ ಭರವಸೆ ನೀಡಿದ್ದಾರೆಂದು ಸಮಿತಿಯಅಧ್ಯಕ್ಷ ಮಹೇಶ್ವರ ಸ್ವಾಮಿ ತಿಳಿಸಿದ್ದಾರೆ.ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಮಾಜಿ ಶಾಸಕ ಸೋಮಲಿಂಗಪ್ಪ, ಬಸವರಾಜಪ್ಪಎನ್ ಜಿ, ಯೋಗರಾಜ್ ಪಿ, ಮಲ್ಲಿಕಾರ್ಜುನ ಸ್ವಾಮಿ ಕುಂಟನಾಳ, ದೊಡ್ಡಯ್ಯ ಬಿಇ,ಶಂಭುಲಿಂಗಯ್ಯ ಗಾಣದಾಳ ಮಠ,ಲಿಂಗನಗೌಡ ನಗರಸಭಾ ಮಾಜಿ ಸದಸ್ಯ ವಿ. ನಟರಾಜ್ರ, ಕಿರಣ್‌ಜೈನ್ ಮೊದಲಾದವರು ಆಗಮಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 