ಅಬ್ಯಾಕಸ್‌ನಲ್ಲಿ ರಬಕವಿ-ಬನಹಟ್ಟಿ ವಿದ್ಯಾರ್ಥಿಗಳ ಸಾಧನೆ
Rabakavi-Banahatti students' achievement in Abacus
ರಬಕವಿ-ಬನಹಟ್ಟಿ 09: ಮಹಾಲಿಂಗಪುರದ ಢಪಳಾಪುರ ವಿದ್ಯಾವಿಹಾರದಲ್ಲಿ ನಡೆದ 2025ರ ಪ್ರೋಆಕ್ಟೀವ್ ಅಬ್ಯಾಕಸ್ ಪ್ರಾದೇಶಿಕ ಸ್ಪರ್ಧೆಯಲ್ಲಿ ಸುಮಂತ್ ಸಿದ್ಧಾರೂಢ ಹೊಳಿ ಕೇವಲ 3 ನಿಮಿಷ 33ಸೆಕೆಂಡ್‌ಗಳಲ್ಲಿ ಗಣಿತದ ನೂರಕ್ಕೆ ನೂರು ಲೆಕ್ಕಗಳನ್ನು ಬಿಡಿಸುವ ಮೂಲಕ ಮ್ಯಾಥ್ಸ್ ಮೆಜಿಶಿಯನ್ ಆಫ್ ದ ಡೇ ಪ್ರಶಸ್ತಿ ಪಡೆದು, ಜನೇವರಿ-2026ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜರುಗುವ ಪ್ರೋಆಕ್ಟೀವ್ ಅಬ್ಯಾಕಸ್‌ನ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಸುಮಂತಗೆ ರಬಕವಿ-ಬನಹಟ್ಟಿ ಸಾಯಿ ಅಬ್ಯಾಕಸ್ ಕ್ಲಾಸಸ್ ನ ಅಬ್ಯಾಕಸ್ ಮಾಸ್ಟರ್ ಟ್ರೇನರ್ ದಾನೇಶ್ವರಿ ಸಂಗಮೇಶ ಮುನ್ನೋಳ್ಳಿ ತರಬೇತುದಾರರಾಗಿದ್ದಾರೆ. ಸಾಯಿ ಅಬ್ಯಾಕಸ್ ಕ್ಲಾಸಸ್, ರಬಕವಿ-ಬನಹಟ್ಟಿಯಿಂದ ಒಟ್ಟು 51 ವಿದ್ಯಾರ್ಥಿಗಳು ಬಾಗವಹಿಸಿದ್ದರು, ಅದರಲ್ಲಿ ಪ್ರಥಮ-5, ದ್ವೀತಿಯ-6, ತೃತೀಯ-17, ಮತ್ತು ಮ್ಯಾತ್ಸ ಮೆಜಿಸಿಯನ ಆಫ್ ದ ಡೇ -1, ಹೀಗೆ ಒಟ್ಟು 29 ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡು, ಪ್ರೋಆಕ್ಟಿವ್ ಅಬ್ಯಾಕಸ್ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಸಾಯಿ ಅಬ್ಯಾಕಸ್ ಕ್ಲಾಸ್ ಮುಖ್ಯಸ್ಥ ಶ್ರೀಮಂತ ಮುನ್ನೊಳ್ಳಿ, ಅಬ್ಯಾಕಸ್ ಟ್ರೇನರ್ ವಿದ್ಯಾ ಮುನ್ನೋಳ್ಳಿ, ದಾನೇಶ್ವರಿ ಮುನ್ನೋಳ್ಳಿ, ಸಂಗಮೇಶ ಮುನ್ನೋಳ್ಳಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ರೋಆಕ್ಟಿವ ಅಬ್ಯಾಕಸ್, ಮುಂಬೈ ಕೊಡಮಾಡುವ ಬೆಸ್ಟ ಅಬ್ಯಾಕಸ್ ಸೆಂಟರ್ ಅವಾರ್ಡ 2025 ಈ ಪ್ರಶಸ್ತಿಯನ್ನು ರಬಕವಿ-ಬನಹಟ್ಟಿಯ, ಸಾಯಿ ಅಬ್ಯಾಕಸ್ ಕ್ಲಾಸಸ್ ಪಡೆದುಕೊಂಡಿದೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 