ಆರ್‌ಎಂಎಸ್‌ಎ ಬಿದರಕುಂದಿ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಆರ್‌ಎಂಎಸ್‌ಎ ಬಿದರಕುಂದಿ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಮುದ್ದೇಬಿಹಾಳ 25: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆರ್‌ಎಂಎಸ್‌ಎ ಬಿದರಕುಂದಿ ಶಾಲೆಯ ವಿದ್ಯಾರ್ಥಿಗಳು ಚೆಸ್ ಮತ್ತು ಯೋಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಚೆಸ್ ನಲ್ಲಿ 17 ವರ್ಷದ ವಯೋಮಿತಿ ಯೋಳಗಿನ ವಿದ್ಯಾರ್ಥಿಗಳಾದ ಪ್ರತೀಕ್ ಪಾಟೀಲ್ , ಅಪ್ಪಾಜಿ ಉಪನಾಳ,ಆದರ್ಶ ಹೆಬ್ಬಾಳ್ ಗೌತಮಿ ಕೊಣ್ಣೂರ್, ಶ್ರೀದೇವಿ ಬಿರಾದಾರ್, 14 ವರ್ಷದ ವಯೋಮಿತಿಯೊಳಗಿನ ಅಲೋಕ್ ನಾಲತವಾಡ , ಸುದೀಪ್ ಬಿರಾದಾರ, ಸ್ಪಂದನ ಬಿರಾದಾರ, ವೈಷ್ಣವಿ ಗಣಾಚಾರಿ, ಆಯ್ಕೆ ಆಗಿರುತ್ತಾರೆ.ಯೋಗ ಸ್ಪರ್ಧೆಯಲ್ಲಿ 17 ವರ್ಷ ವಯೋಮಿತಿ ಒಳಗಿನ ರಿತಿಕಾ ಆರ್, ಹರ್ಷಿತಾ ಸಂಗೊಳ್ಳಿ, 14 ವರ್ಷದ ವಯೋಮಿತಿ ಒಳಗಿನ ಬಿಂದುಶ್ರೀ ಎಮ್ .ಪಾಟೀಲ್, ಅಮೃತ ಎಂ ಪಾಟೀಲ್ ಆಯ್ಕೆ ಆಗಿರುತ್ತಾರೆ. ಶಾಲೆಯ ಮುಖ್ಯ ಗುರುಗಳಾದ ಅನಿಲ್ ಕುಮಾರ್ ರಾಥೋಡ್, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕರ್ನಾಟಕ ರಾಜ್ಯ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮುದ್ದೇಬಿಹಾಳ ಅಧ್ಯಕ್ಷರಾದ ಎ.ಸಿ. ಕೆರೂರ, ಎನ್ ಎಸ್ ಬಿರಾದಾರ ಮಾರ್ಗದರ್ಶನ ನೀಡುತ್ತಾರೆ. ಶಾಲೆಯ ಎಸ್.ಡಿ.ಎಂ.ಸಿ .ಅಧ್ಯಕ್ಷರು ಉಪಾಧ್ಯಕ್ಷರು , ಮತ್ತು ಸರ್ವ ಸದಸ್ಯರು ಶಾಲಾ ಸಿಬ್ಬಂದಿ ವರ್ಗ ಮಕ್ಕಳ ಪಾಲಕ, ಪೋಷಕರು , ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿ.ಎಸ್.ಸಾವಳಗಿ ತಾಲೂಕ ದೈಹಿಕ ಶಿಕ್ಷಣ ಪರೀಕ್ಷಕರಾದ ಬಿ .ವೈ. ಕವಡಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.