ಕಬ್ಬಿಗೆಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
Protest demanding support price for sugarcane
ಯರಗಟ್ಟಿ, 31 : ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತಸಂಘದಿಂದ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ.ರೈತ ಸಂಘದ ತಾಲೂಕಾ ಕಾರ್ಯಾಅಧ್ಯಕ್ಷ ರಾಮಕೃಷ್ಣ ಎಳ್ಳಮ್ಮಿ ಮಾತನಾಡಿ ಪ್ರತಿ ಟನ್ ಕಬ್ಬಿಗೆ ?4000 ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದರು.
ಬೆಂಬಲ ಬೆಲೆ ಘೋಷಣೆ ಮಾಡಿದೆ ಇದ್ದಲ್ಲಿ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರಂತರ ಪ್ರತಿಭಟನೆ ಮಾಡಲಾಗುವುದು. ಹೆಚ್ಚುತ್ತಿರುವ ಗೊಬ್ಬರ ಹಾಗೂ ಕಾರ್ಮಿಕರ ವೇತನದ ವೆಚ್ಚದಿಂದಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ರೈತ ಸಂಘದ ನಾಯಕರು ಆಗ್ರಹಿಸಿದರು.
ಈ ವೇಳೆ ವಿಶಾಲಗೌಡ ಪಾಟೀಲ, ಸಂತೋಷ ದೇವರಡ್ಡಿ, ಗಿರೇಪ್ಪ ಗಂಗರೆಡ್ಡಿ, ಕಾಂತು ಜಕಾತಿ, ಸಂತೋಷ ಹಾದಿಮನಿ, ಮಲ್ಲಿಕಾರ್ಜುನ ಹೊನ್ನಾಳ, ಮುದಕಪ್ಪ ಕಾಮಣ್ಣವರ, ಬೀರ್ಪ ಬನ್ನೂರು, ಶ್ರೀಶೈಲ ದಿಡಗನ್ನವರ, ಆದಮ್ಮ ಬಳಿಗಾರ, ಮಲಿಕ ಜಮಾದಾರ, ಯಮನಪ್ಪ ಮಾಳಗಿ, ಹನಮಂತ ಬಿಲ್ಲೋಡಿ, ವೆಂಕಪ್ಪ ಹುಲಕುಂದ, ಇಮಾಮಸಾಬ ಶಿಕ್ಕಲಗಿ, ಆನಂದ ಬಾವಿಹಾಳ, ಹೊಳೆಪ್ಪ ದೇವರಡ್ಡಿ, ಸುಭಾಷ ಇಟ್ನಾಳ, ನಾಗಪ್ಪ ಲತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 