ಲೋಕದರ್ಶನ ವರದಿ
ಶಿಗ್ಗಾವಿ13: ರಾಜಕೀಯ ಕ್ಷೇತ್ರದ ಮೂಲಕ ಸಾಮಾಜಿಕ ಪರಿವರ್ತನಾ ಕಾರ್ಯ ಮಾಡುವುದರೊಂದಿಗೆ ತಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರ ಸಚಿವರಾದ ಅನಂತ ಕುಮಾರ ಅವರ ನಿಧನದಿಂದ ದೇಶಕ್ಕೂ ಕರುನಾಡಿಗೂ ತುಂಬಲಾರದ ನಷ್ಟವಾಗಿದೆ.
ಸತತ ಆರು ಬಾರಿ ಸಂಸದರಾಗಿ ಸಂಸತ್ತಿನಲ್ಲಿ ಕನರ್ಾಟಕದ ಪರ ಧ್ವನಿಯಾಗಿದ್ದ ಅವರು ಉತ್ತಮ ವಾಗ್ಮಿ ಮೇಲಾಗಿ ರಾಜಕೀಯ ಚಿಂತಕರಾಗಿದ್ದರು. ತಮ್ಮದೇಯಾದ ವಿಶಿಷ್ಟ ಚಿಂತನೆ, ವಿಚಾರಧಾರೆಗಳನ್ನು ಪ್ರತಿಪಾದಿಸುತ್ತಲೇ ಸಮಾಜೀಕ ಕಾರ್ಯಗಳಿಗೆ ಸಾಕ್ಷಿಯಾಗಿದ್ದರು. ಕನ್ನಡದ ಧೀಮಂತ ರಾಜಕೀಯ ಮುತ್ಸದ್ಧಿ ಅನಂತ ಕುಮಾರ ಅವರ ನಿಧನಕ್ಕೆ ಕನರ್ಾಟಕ ಜಾನಪದ ವಿಶ್ವವಿದ್ಯಾಲಯವು ಸಂತಾಪವನ್ನು ಸೂಚಿಸಿದೆ.
ಮೌಲ್ಯಮಾಪನ ಕುಲಸಚಿವ ಡಾ. ಎಂ.ಎನ್ ವೆಂಕಟೇಶ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮೌನಾಚರಣೆ ಮಾಡುವ ಮೂಲಕ ಕೇಂದ್ರ ಸಚಿವ ಅನಂತ ಕುಮಾರ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಈ ಸಮಯದಲ್ಲಿ ಜಾನಪದ ವಿಶ್ವವಿದ್ಯಾಲಯದ ಸಮಸ್ತ ಪ್ರಾಧ್ಯಾಪಕ ವರ್ಗ ಹಾಗೂ ಭೋಧಕೇತರ ಸಿಬ್ಬಂದಿ ಸಂತಾಪ ಸೂಚಕ ಸಭೆಯಲ್ಲಿ ಹಾಜರಿದ್ದರು.