ಜನೇವರಿ 24 ರಂದು ಚಲನ ಚಿತ್ರ ಕಲಾವಿದ ರವೀಚಂದ್ರನ್ ಅಥಣಿಗೆ
On January 24th, film artist Ravichandran Athani
ಅಥಣಿ 22: ಅಥಣಿಯ ಎಸ್.ಎಮ್.ನಾರಗೊಂಡ ಇಂಟರನ್ಯಾಶನಲ್ ಸ್ಕೂಲನ ಶಾಲಾ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಇದೇ ಜನೇವರಿ 24 ಮತ್ತು 25 ರಂದು ಸಂಜೆ 5.30ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಶೇಗುಣಸಿ ವೀರಕ್ತ ಮಠದ ಡಾ.ಮಹಾಂತ ಪ್ರಭು ಸ್ವಾಮೀಜಿ, ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀಶೈಲ ನಾರಗೊಂಡ ವಹಿಸುವರು, ಕಾರ್ಯಕ್ರಮವನ್ನು ಶಾಸಕರಾದ ಲಕ್ಷ್ಮಣ ಸವದಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಖ್ಯಾತ ಚಿತ್ರನಟ ವಿ.ರವೀಚಂದ್ರನ್ ಆಗಮಿಸುವರು, ಕಾಗವಾಡ ಶಾಸಕ ರಾಜು ಕಾಗೆ ವೇದಿಕೆಯಲ್ಲಿ ಉಪಸ್ಥಿತರಿರುವರು ಎಂದು ಯುವ ಧುರೀಣ ಚಿದಾನಂದ ಸವದಿ ಮತ್ತು ಸಂಸ್ಥೆಯ ಅಧ್ಯಕ್ಷ ವಿವೇಕ ನಾರಗೊಂಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅತಿಥಿಗಳಾಗಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಪರ್ಪ ಸವದಿ, ಎಸ್.ಎಮ್.ನಾರಗೊಂಡ ಇಂಟರ್ ನ್ಯಾಶನಲ್ ಶಾಲೆಯ ಅಧ್ಯಕ್ಷ ವಿವೇಕ ನಾರಗೊಂಡ, ಬಸವನ ಬಾಗೇವಾಡಿಯ ವೈದ್ಯ ಡಾ.ಮಹಾಂತೇಶ ಜಾಲಗೇರಿ, ಮೀರಜನ ಮೂತ್ರ ಪಿಂಡ ತಜ್ಞ ಡಾ.ಅಮೀತ ಗಾಢವೆ, ಚಿಕ್ಕೋಡಿಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೀತಾರಾಮ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜೆ ಆಗಮಿಸುವರು ಎಂದು ತಿಳಿಸಿದರು.
ಜನೇವರಿ 25 ರಂದು ಸಂಜೆ ನಡೆಯಲಿರುವ ಮಕ್ಕಳ ಮನೋರಂಜನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾರೂಗೇರಿಯ ಚಿಕ್ಕಮಕ್ಕಳ ತಜ್ಞ ಡಾ.ಗೀರೀಶ ನಾರಗೊಂಡ ವಹಿಸುವರು, ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ನಾಯಕ ಚಿದಾನಂದ ಸವದಿ ನೆರವೇರಿಸುವರು, ಕಾರ್ಯಕ್ರಮದಲ್ಲಿ ಡಾ.ಸಿ.ಎ.ಸಂಕ್ರಟ್ಟಿ, ಡಾ.ರವಿ ಪಾಂಗಿ, ಡಾ.ಜಿ.ಎಸ್.ಪಾಟೀಲ, ಡಾ.ಮಹೇಶ ಕಾಪಶಿ, ಹಾರೂಗೇರಿಯ ಎಸ್.ಎಮ್.ನಾರಗೊಂಡ ಶಾಲೆಯ ಪ್ರಾಚಾರ್ಯ ಪ್ರಶಾಂತ ಎಲ್.ಎಚ್, ಅಥಣಿ ಶಾಲೆಯ ಪ್ರಾಚಾರ್ಯ ಇ.ಜಿ.ದಿಕ್ಷೀತ ಉಪಸ್ಥಿತರಿರುವರು ಎಂದು ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 