ರಾಷ್ಟ್ರೀಯ ಓರಲ್ ಮೆಡಿಸಿನ್, ರೇಡಿಯಾಲಜಿ ದಿನ ಆಚರಣೆ

National Oral Medicine and Radiology Day celebrated

ಲೋಕದರ್ಶನ ವರದಿ 

ಲೋಕದರ್ಶನ ವರದಿ 

ರಾಷ್ಟ್ರೀಯ ಓರಲ್ ಮೆಡಿಸಿನ್, ರೇಡಿಯಾಲಜಿ ದಿನ ಆಚರಣೆ  

ಬೆಳಗಾವಿ 24: ರಾಷ್ಟ್ರೀಯ ಬಾಯಿ ಓಷಧ ಮತ್ತು ವಿಕಿರಣಶಾಸ್ತ್ರ ದಿನಾಚರಣೆ ಅಂಗವಾಗಿ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದಲ್ಲಿ ಗುರುವಾರ ನಗರದ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಬಾಯಿ ಓಷಧ ಮತ್ತು ವಿಕಿರಣಶಾಸ್ತ್ರ ವಿಭಾಗದ ವತಿಯಿಂದ ಬಾಯಿ ರೋಗ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ಆಯೋಜನೆ ಮಾಡಲಾಯಿತು.   

ಬೆಳಗಾವಿ ಕೆಎಲ್‌ಇ ಡಾ. ಸಂಪತ್ಕುಮಾರ್ ಶಿವಾಂಗಿ ಕ್ಯಾನ್ಸರ್ ಆಸ್ಪತ್ರೆಯ  ಆಪರೇಷನ್ ಮತ್ತು ಕ್ವಾಲಿಟಿ ಅಶ್ಯೂರೆನ್ಸ್‌ ವ್ಯವಸ್ಥಾಪಕಿ ಡಾ. ರೇಣುಕಾ ಅಮ್ಮಣಗಿ ವಿಶೇಷ ಉಪನ್ಯಾಸ ನೀಡಿದರು.   

ಜಿಲ್ಲೆಯ ಎಲ್ಲಾ ಸರ್ಕಾರಿ ದಂತ ಆರೋಗ್ಯ ಅಧಿಕಾರಿಗಳು ಹಾಗೂ ಕೆಎಲ್‌ಇ ಉಪಗ್ರಹ ಕೇಂದ್ರಗಳಲ್ಲಿ ಕೆಲಸ ಮಾಡುವ ದಂತ ಶಸ್ತ್ರಚಿಕಿತ್ಸಕರಿಗೆ ಬಾಯಿಯ ಲೋಳೆಪೊರೆ, ಹಾಗೂ ಪೂರ್ವ ಗಾಯಗಳ ಗುರುತಿಸುವಿಕೆ ಹಾಗೂ 

ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ವೈದ್ಯರಾದ ಡಾ. ಶಿವಯೋಗಿ, ಡಾ. ದಾನೇಶ್ವರಿ, ಡಾ. ನಮ್ರತಾ ಮತ್ತು ಡಾ. ಜಮೀರಾ ಸಿಬಿಸಿಟಿ, ಥೆರೂ​‍್ಯಟಿಕ್ ಯುಎಸ್ಜಿ, ಟೆನ್ಸ್‌ ನಂತಹ ಇಲಾಖೆಯಲ್ಲಿ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರೋಗ್ಯ ಅಧಿಕಾರಿಗಳು ಹಾಗೆ ದಂತ ಚಿಕಿತ್ಸಕರರಿಗೆ ಡಾ. ಅರವಿಂದ್ ಪ್ರಮಾಣಪತ್ರ ವಿತರಿಸಿದರು. ಪ್ರಾಂಶುಪಾಲ ಡಾ. ಅಲ್ಕಾ ಕಾಳೆ, ಡಾ. ವಸಂತಿ, ವಿಭಾಗಗಳ ಮುಖ್ಯಸ್ಥರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು. ಡಾ. ವೈಶಾಲಿ ಕೇಲುಸ್ಕರ್ ಸ್ವಾಗತಿಸಿ ಡಾ. ಆರತಿ ವಂದನೆ ಸಮರ​‍್ಿಸಿದರು. 