ಮಹಾಲಿಂಗಪುರದಲ್ಲಿ ಡಿ. 7 ರಂದು ನಾಮದೇವ ಶಿಂಪಿ ಸಮಾಜದ ವಧು-ವರರ ಸಮ್ಮೇಳನ
Namdev Shimpi Samaj bride and groom conference to be held in Mahalingapur on December 7th
ರಬಕವಿ-ಬನಹಟ್ಟಿ 23: ಕರ್ನಾಟಕ ರಾಜ್ಯ ಸಂತ ನಾಮದೇವ ಶಿಂಪಿ ಸಮಾಜ ವಧು-ವರರ ವೇದಿಕೆಯಿಂದ ಅನುಬಂಧ-1 ಶೀರ್ಷಿಕೆಯಡಿ ರವಿವಾರ ಡಿಸೆಂಬರ್ 7 ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ರಾಜ್ಯಮಟ್ಟದ ವಧು-ವರರ ಸಮ್ಮೇಳನವನ್ನು ಏರಿ್ಡಸಲಾಗಿದೆ ಎಂದು ಮಹಾಲಿಂಗಪುರ ನಗರದ ನಾಮದೇವ ಶಿಂಪಿ ಸಮಾಜದ ಗೌರವಾಧ್ಯಕ್ಷ ಬಾಳಕೃಷ್ಣ ಮಾಳವದೆ ಹೇಳಿದರು.
ಬನಹಟ್ಟಿ ನಗರದ ವಿಠ್ಠಲ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, ಮಹಾಲಿಂಗಪುರದ ಎಪಿಎಂಸಿ ಯಾರ್ಡನ ರಾಂಭವ ಗಾರ್ಮೆಂಟ್ಸ್ ಎದುರಿನ ಶ್ರೀ ಗಣಪತಿ ದೇವಸ್ಥಾನದಲ್ಲಿ ಜರುಲಿದೆ. ರಾಜ್ಯ ಮಟ್ಟದ ವಧು-ವರ ಸಮ್ಮೇಳನ ಇದಾಗಿದ್ದು ನಮ್ಮ ಸಮಾಜದ ವಧು-ವರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ರಬಕವಿ-ಬನಹಟ್ಟಿ ತಾಲೂಕಿನ ಸಮಾಜದ ಬಾಂಧವರು ಸಮ್ಮೇಳನದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಅರುಣ ಚಿಕೋರ್ಡೆ, ಬಾಳು ರೇಣಕೆ, ವಿನೋದ ಸಿಂಪಿ, ಮಹಾನಿಂಗ ಹಾಸೀಲಕರ, ವಿವೇಕಾನಂದ ಭಸ್ಮೆ, ವಿಜಯ ಕೋಪರ್ಡೆ, ಮಾಧವಾನಂದ ಪ್ರಭು ಕೋಪರ್ಡೆ, ನಾಗರಾಜ ಖಟಾವಕರ, ಪರಶುರಾಮ ಕೋಪರ್ಡೆ, ಗಂಗಪ್ಪ ಹಾಸೀಲಕರ, ವಜ್ರಕಾಂತ ಕೋಪರ್ಡೆ, ಬಾಳಕೃಷ್ಣ ಹಾಸೀಲಕರ, ಸುರೇಶ ಕೋಪರ್ಡೆ, ರಾಘು ಕೋಪರ್ಡೆ, ಸುನೀಲ ಕೋಪರ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 