ಧಾರವಾಡ ಜಿಲ್ಲೆಗೆ ಆದ್ಯತಾ ವಲಯಗಳ ಅಡಿಯಲ್ಲಿ ನಬಾರ್ಡ್‌ದಿಂದ ರೂ.16,342.04 ಕೋಟಿ ಸಾಲ ಸಾಮರ್ಥ್ಯದ ಅಂದಾಜು

ಧಾರವಾಡ ಜಿಲ್ಲೆಗೆ ಆದ್ಯತಾ ವಲಯಗಳ ಅಡಿಯಲ್ಲಿ ನಬಾರ್ಡ್‌ದಿಂದ  ರೂ.16,342.04 ಕೋಟಿ ಸಾಲ ಸಾಮರ್ಥ್ಯದ ಅಂದಾಜು NABARD estimates loan capacity of Rs. 16,342.04 crore under priority sectors for Dharwad district


ಧಾರವಾಡ ಮಾ.12: ಧಾರವಾಡ ಜಿಲ್ಲೆಗೆ ಆದ್ಯತಾ ವಲಯಗಳ ಅಡಿಯಲ್ಲಿ ನಬಾರ್ಡ್‌ದಿಂದ ರೂ.16,342.04 ಕೋಟಿ ಸಾಲ ಸಾಮರ್ಥ್ಯವನ್ನು ಅಂದಾಜಿಸಲಾಗಿದೆ. ನಾಬಾರ್ಡ್‌ (ಓಂಃಂಖಆ) ತಯಾರಿಸಿದ 2026-27ನೇ ಹಣಕಾಸು ವರ್ಷದ ಕಠಜಟಿಣಚಿಟ ಐಟಿಞಜಜ ಕಟಚಿಟಿ (ಕಐಕ) ಪುಸ್ತಕವನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ (ಮಾ.10) ಬ್ಯಾಂರ್ಕಸ್ ಸಮಾಲೋಚನಾ ಸಭೆ (ಡಿಸಿಸಿ) ಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ್ ಅವರು ಬಿಡುಗಡೆ ಮಾಡಿದರು.  

 ಈ ಸಂದರ್ಭದಲ್ಲಿ ನಬಾರ್ಡ್‌ನ ಎಜಿಎಂ ಮಯೂರ್ ಕಾಂಬಳೆ ಅವರು ಮಾತನಾಡಿ, ಸಾಲದ ಸಾಮರ್ಥ್ಯವನ್ನು ಎಂಎಸ್‌ಎಂಇ ವಲಯಕ್ಕೆ ಸರಿಸುಮಾರು ಶೇ. 44, ಕೃಷಿ ವಲಯಕ್ಕೆ ಶೇ. 41.5 ಮತ್ತು ಶಿಕ್ಷಣ, ವಸತಿ, ನವೀಕರಿಸಬಹುದಾದ ಇಂಧನ, ಸಾಮಾಜಿಕ ಮೂಲಸೌಕರ್ಯ ಮತ್ತು ಇತರವುಗಳಿಗೆ ಶೇ. 14.5 ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.  

ಎಂಎಸ್‌ಎಂಇ ವಲಯಕ್ಕೆ ಬಲವಾದ ಬೆಳವಣಿಗೆಯನ್ನು ಅಂದಾಜಿಸಲಾಗಿದೆ ಮತ್ತು ಹವಾಮಾನ ಅಪಾಯಗಳಿಗೆ ಹೊಂದಿಕೊಳ್ಳಲು ಮತ್ತು ರೈತರ ಆದಾಯವನ್ನು ಸುಧಾರಿಸಲು ಕೃಷಿ ಯಾಂತ್ರೀಕರಣ, ಆಹಾರ ಸಂಸ್ಕರಣೆ, ಕೊಯ್ಲು ನಂತರದ ನಿರ್ವಹಣೆ ಮತ್ತು ನೀರು ಕೊಯ್ಲು ರಚನೆಗಳು ಸೇರಿದಂತೆ ಕೃಷಿ ಕ್ಷೇತ್ರದ ಅಡಿಯಲ್ಲಿ ದೀರ್ಘಾವಧಿಯ ಹೂಡಿಕೆಗೆ ಒತ್ತು ನೀಡಲಾಗಿದೆ ಎಂದರು.   

ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾದ ಉಪ ಪ್ರಾದೇಶಿಕ ವ್ಯವಸ್ಥಾಪಕ ಅಮರೀಶ್ ಗೌಡ, ಆರ್‌ಬಿಐನ ಎಜಿಎಂ ಅರುಣ ಕುಮಾರ್, ಧಾರವಾಡದ ಎಲ್‌ಡಿಎಂ ಬಸವರಾಜ ಗಡದವರ ಅವರು ಉಪಸ್ಥಿತರಿದ್ದರು.