ಸಚಿವ ಬಸವರಾಜ ರಾಯರಡ್ಡಿ ಗದಗ ಜಿಲ್ಲಾ ಪ್ರವಾಸ

ಸಚಿವ ಬಸವರಾಜ ರಾಯರಡ್ಡಿ ಗದಗ ಜಿಲ್ಲಾ ಪ್ರವಾಸ   Minister Basavaraja Rayareddy's tour of Gadag district

ಲೋಕದರ್ಶನ ವರದಿ 

ಗದಗ 5:  ರಾಜ್ಯದ ಸಂಪುಟ ದರ್ಜೆ ಸಚಿವರಾದ ಬಸವರಾಜ ರಾಯರಡ್ಡಿ ಅವರು ಅಗಸ್ಟ 7 ರಿಂದ 9 ರವರೆಗೆ  ಗದಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು ವಿವರ ಈ ಕೆಳಗಿನಂತಿದೆ. ಅಗಸ್ಟ 7 ರಂದು ಬೆಳಿಗ್ಗೆ 9.30 ಗಂಟೆಗೆ ಯಲಬುರ್ಗಾದಿಂದ ರಸ್ತೆ ಮೂಲಕ ಹೊರಟು ಬೆಳಿಗ್ಗೆ 10.30 ಗಂಟೆಗೆ ಗದಗಿಗೆ ಆಗಮಿಸಿ ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವರು. ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 1.30 ಗಂಟೆಗೆ ರೈತರೊಂದಿಗೆ ಬರಪೀಡಿತ ಪ್ರದೇಶಗಳ ವೀಕ್ಷಣೆ ಮಾಡುವರು. ಮಧ್ಯಾಹ್ನ 3.30 ಗಂಟೆಗೆ ಮುಂಡರಗಿ ತಾಲೂಕು ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಸಭೆ ಹಾಗೂ ರೈತರೊಂದಿಗೆ ಸಭೆ ಹಾಗೂ ರೈತರೊಂದಿಗೆ ಬರ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿ ಸಂಜೆ 6.30 ಗಂಟೆಗೆ ಗದುಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.   

ಅಗಸ್ಟ 8 ರಂದು ಬೆಳಿಗ್ಗೆ 9.30 ಗಂಟೆಗೆ ಗದಗಿನಿಂದ ರಸ್ತೆ ಮೂಲಕ ಹೊರಟು ಬೆಳಿಗ್ಗೆ  10.30 ಗಂಟೆಗೆ ಶಿರಹಟ್ಟಿಗೆ ಆಗಮಿಸಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ ಅಧಿಕಾರಿಗಳೊಂದಿಗೆ ಸಭೆ ಹಾಗೂ ರೈತರೊಂದಿಗೆ ಬರ ಪೀಡಿತ ಪ್ರದೇಶಗಳ ವೀಕ್ಷಣೆ  ನಡೆಸುವರು. ಮಧ್ಯಾಹ್ನ 2 ಗಂಟೆಗೆ ಶಿರಹಟ್ಟಿಯಿಂದ  ಹೊರಟು ಮಧ್ಯಾಹ್ನ 3 ಗಂಟೆಗೆ ರೋಣಕ್ಕೆ ಆಗಮಿಸಿ ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ಅಧಿಕಾರಿಗಳೊಂದಿಗೆ ಸಭೆ ಹಾಗೂ ರೈತರೊಂದಿಗೆ ಬರಪೀಡಿತ ಪ್ರದೇಶಗಳ ವೀಕ್ಷಣೆ ನಡೆಸುವರು. ರಾತ್ರಿ 6 ಗಂಟೆಗೆ  ರೋಣದಿಂದ ಸಂಜೆ 7.30 ಗಂಟೆಗೆ ಧಾರವಾಡಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.   

ಅಗಸ್ಟ 9 ರಂದು ಬೆಳಿಗ್ಗೆ 9.30 ಗಂಟೆಗೆ  ಧಾರವಾಡದಿಂದ ರಸ್ತೆ ಮೂಲಕ ಹೊರಟು ಬೆಳಿಗ್ಗೆ 11 ಗಂಟೆಗೆ ನರಗುಂದ ತಾಲೂಕು ಅಧಿಕಾರಿಗಳೊಂದಿಗೆ ಸಭೆ ಹಾಗೂ ರೈತರೊಂದಿಗೆ ಬರಪೀಡಿತ ಪ್ರದೇಶಗಳ ವೀಕ್ಷಣೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.       ಮಂತ್ರಿಗಳ ಪ್ರವಾಸ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಹಾರ , ಸನ್ಮಾನ ಇತ್ಯಾದಿಗಳನ್ನು ಮಾಡಬಾರದಾಗಿ ವಿನಂತಿಸಿದೆ.