ಹಾರೂಗೇರಿಯಲ್ಲಿ ಜ್ಞಾಪ ಉತ್ಸವ-31 ಸಮಾರಂಭ
Memorial Day-31 ceremony at Harugeri
ಹಾರೂಗೇರಿ 31 : ವಿದ್ಯಾರ್ಥಿಗಳು ಗೆಲ್ಲುವುದನ್ನೇ ಅಭ್ಯಾಸ ಮಾಡಿಕೊಳ್ಳಬೇಕು. ಆತ್ಮವಿಶ್ವಾಸ, ಛಲ, ಓದಿನಲ್ಲಿ ಶ್ರದ್ಧೆ ಇದ್ದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಜಮಖಂಡಿಯ ಸಾಹಿತಿ ಡಾ.ವಾಯ್.ವಾಯ್.ಕೊಕ್ಕನವರ ಹೇಳಿದರು ಪಟ್ಟಣದ ಚಂದ್ರಮಶ್ರೀ ಟ್ರಸ್ಟ ವಿಶ್ವಸ್ಥ ಸಂಸ್ಥೆಯ ಜ್ಞಾನ ಗಂಗೋತ್ರಿ ಪ್ರಾಥಮಿಕ ಮತ್ತು ಶ್ರೀ ಪದ್ಮಾವತಿ ಪ್ರೌಢಶಾಲೆಯಲ್ಲಿ ನಡೆದ ಜ್ಞಾಪ ಉತ್ಸವ-31 ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ದಿನದಲ್ಲಿ ಕನಿಷ್ಠ 8 ಗಂಟೆ ಕಾಲ ಟಿ.ವಿ, ಮೊಬೈಲ್‌ನಿಂದ ದೂರ ಉಳಿಯಬೇಕು. ಮಕ್ಕಳಿಗೆ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬುದೇ ಸಂಸ್ಥೆಯ ಗುರಿಯಾಗಿದೆ.
ಪೋಷಕರು ತಮ್ಮ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಬೇಕು. ಶಿಸ್ತು, ಸಂಯಮ, ಬದ್ಧತೆ ಇದ್ದಾಗ ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಎಸ್.ಎ.ದಟವಾಡ ಮಾತನಾಡುತ್ತ ಉತ್ತಮ ಸೌಕರ್ಯ, ಬುದ್ಧಿವಂತ ಶಿಕ್ಷಕರು, ಗುಣಮಟ್ಟದ ಶಿಕ್ಷಣ ನೀಡುವ ಈ ಶಾಲೆ ಬಗ್ಗೆ ಪೋಷಕರು ನಂಬಿಕೆ, ಅಭಿಮಾನವಿಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂದು ಹೇಳಿದರು. ಜ್ಞಾಪ ಉತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ, ಚಿತ್ರಕಲೆ, ರಂಗೋಲಿ, ವಿಜ್ಞಾನ ವಸ್ತು ಪ್ರದರ್ಶನ, ಮಕ್ಕಳ ಸ್ನೇಹೋತ್ಸವ ಮತ್ತು ನೃತ್ಯ ಸಂಭ್ರಮ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಸಿಎ ವೃಷಭ ಶೆಟ್ಟಿ, ಸಿಎ ಜಿನ್ಮತಿ ಶಿರಹಟ್ಟಿ, ಸಿಪಿಐ ಕುಮಾರ ಹಾಡಕಾರ, ಅರಣ್ಯಾಧಿಕಾರಿ ಶಬಾನಾ ಹಕ್ಕಿ, ವಿಶ್ರಾಂತ ಪ್ರಾಚಾರ್ಯ ಜಿ.ಆರ್.ಸುಳ್ಳದ, ಪ್ರೊ.ಎಸ್.ಕೆ.ಪತ್ತಾರ, ಕಾಶಪ್ಪ ಬಾಡಗಿ, ಅಭಿನಂದನ ಖೇಮಲಾಪೂರೆ, ಪ್ರಮಥ ದಟವಾಡ, ಗುಂಡುರಾವ ದಟವಾಡ, ಸುಭಾಸ ವಂಟಗೂಡೆ, ಮಲ್ಲಿನಾಥ ಹುಕ್ಕೇರಿ, ಬಾಬುರಾವ ಹಳ್ಳೂರ, ರೂಪಾ ದಟವಾಡ, ವಿಜಯ ಹಂಜೆ, ಐ.ಎ.ಜಮಾದಾರ, ಮುಖ್ಯೋಪಾಧ್ಯಾಯ ಆರ್.ಎಸ್.ಜಾಧವ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು. ಎಂ.ಎಸ್.ಬಳವಾಡ ವರದಿ ವಾಚಿಸಿದರು. ಶಿಕ್ಷಕಿ ಎಸ್.ಎಸ್.ಅಂಗಡಿ ಸ್ವಾಗತಿಸಿದರು. ಪ್ರೀತಿ ಹಿಪಟ್ಟರಗಿ ಕಾರ್ಯಕ್ರಮ ನಿರೂಪಿಸಿದರು. ರಾಜು ಅಸ್ಕಿ ವಂದಿಸಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 