ಗಣಿತ ಕಬ್ಬಿಣದ ಕಡಲೆಯಲ್ಲ, ಬದಲಾಗಿ ಗಣಿತ ನೆಲಗಡಲೆಯಾಗಿದೆ : ಮುಖ್ಯ ಶಿಕ್ಷಕ ಜಿ.ಐ. ಅವರವಾಡಮಠ
Mathematics is not an iron nut, but rather a groundnut: Headmaster G.I. Avaravad Math
ಜಮಖಂಡಿ 23: ದಿನನಿತ್ಯದ ವ್ಯವಹಾರಗಳು ಗಣಿತದ ಆಧಾರದ ಮೇಲೆ ನಡೆಯುತ್ತವೆ. ಜೀವನವೆ ಗಣಿತಮಯ ಆಗಿದೆ. ಹಾಗಾಗಿ ಗಣಿತ ಕಬ್ಬಿಣದ ಕಡಲೆಯಲ್ಲ, ಬದಲಾಗಿ ಗಣಿತ ನೆಲಗಡಲೆಯಾಗಿದೆ ಎಂದು ನಿವೃತ್ರ ಮುಖ್ಯ ಶಿಕ್ಷಕ ಜಿ.ಐ. ಅವರವಾಡಮಠ ಹೇಳಿದರು.
ಗಣಿತಜ್ಞ ಶ್ರೀನಿವಾಸ ರಾಮಾನುಜನ ಅವರ ಹುಟ್ಟು ಹಬ್ಬದ ಅಂಗವಾಗಿ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣಿತದ ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಬಹಳ ಸರಳ ಮತ್ತು ಸುಂದರ ಆಗುತ್ತದೆ ಎಂದರು.
ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಮಾತನಾಡಿ, ಗಣಿತದ ಪ್ರತಿ ಸೂತ್ರದ ಹಿಂದಿನ ಅಂಶ ಮತ್ತು ಸಂಗತಿಯನ್ನು ತಿಳಿದುಕೊಳ್ಳಲು ಏನು, ಏಕೆ ಮತ್ತು ಹೇಗೆ ಎಂದು ಸ್ವಯಂ ಪ್ರಶ್ನಿಸಿಕೊಂಡರೆ ಕಲಿಕೆ ಸುಲಭವಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಪಿ.ಐ. ಹೊಸಮಠ ಇದ್ದರು. 8ನೇ ತರಗತಿಯ ಮಕ್ಕಳು ಗಣಿತ ರೂಪಕ ಪ್ರದರ್ಶಿಸಿದರು. 9ನೇ ತರಗತಿಯ ವಿದ್ಯಾರ್ಥಿನಿಯರು ಗಣಿತ ನೃತ್ಯ ಪ್ರದರ್ಶಿಸಿದರು. ಸಮೀಕ್ಷಾ ಹಕ್ಕೆ ಗಣಿತದ ಹಾಡು ಹೇಳಿದರು. ಶ್ರಾವಣಿ ಹಿರೇಮಠ ಪ್ರಾರ್ಥನೆ ಗೀತೆ ಹಾಡಿದರು. ಸ್ನೇಹಾ ಚನವೀರ ಸ್ವಾಗತಿಸಿದರು. ಶಿಕ್ಷಕಿ ಸುನಿತಾ ಕುಮಕಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೈಬಾ ಜಹಗೀರದಾರ ನಿರೂಪಿಸಿದರು. ಸಾಯಿರಾಜ ಅಸುಗಡೆ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 