ದುಂದು ವೆಚ್ಚದ ಆಡಂಬರಕ್ಕಿಂತ ಸಾಮೂಹಿಕ ವಿವಾಹ ಉತ್ತಮ : ಶಿವಕುಮಾರ ಸ್ವಾಮೀಜಿ
Mass marriage is better than extravagant pomp and show: Shivakumara Swamiji
ಧಾರವಾಡ 09: ಬಡ ವರ್ಗದ ಜನರು ಸಾಲ ಸೋಲ ಮಾಡಿ ಆಡಂಬರಕ್ಕಾಗಿ ಮದುವೆಗೆ ಹೆಚ್ಚು ಖರ್ಚು ಮಾಡಬಾರದು. ಅದರ ಬದಲು ಮಠಗಳಲ್ಲಿ ಆಯೋಜಿಸುವ ಇಂಥ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳಬೇಕು ಎಂದು ನರಗುಂದ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು. ಇಲ್ಲಿನ ರಾಜೀವಗಾಂಧಿ ನಗರದಲ್ಲಿರುವ ಅಲ್ಲೀಪುರ ಮಹಾದೇವ ತಾತನವರ ಮಠದಲ್ಲಿ ತಾತನವರ 38ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಭಾನುವಾರ ಏರಿ್ಡಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಅಲ್ಲೀಪುರ ಮಹಾದೇವ ತಾತನವರು ಭಕ್ತರ ಉದ್ಧಾರಕ್ಕಾಗಿಯೇ ಜನಿಸಿದ ಶಿವಯೋಗಿ ಸಾಮ್ರಾಟರು. ಅವರು ನೆಲೆಸಿದ್ದ ಇಂಥ ಪುಣ್ಯಭೂಮಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿ ನಿಜವಾಗಿ ಪುಣ್ಯವಂತರು. ದಂಪತಿ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದರು. ಹುಬ್ಬಳ್ಳಿ ವಾಣಿಜ್ಯತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿ, ಸಮಾಜದಲ್ಲಿ ದುಷ್ಟ ಶಕ್ತಿಗಳನ್ನು ದಮನ ಮಾಡಿ, ಶಿಷ್ಟರ ರಕ್ಷಣೆಗಾಗಿ ಸಾಕ್ಷಾತ್ ಶಿವನು ಅಲ್ಲೀಪುರ ಮಹಾದೇವ ತಾತನವರ ರೂಪದಲ್ಲಿ ಬಂದು ಭಕ್ತರನ್ನು ಉದ್ಧರಿಸಿದ್ದಾನೆ.
ತಾತನ ಲೀಲಾ ಪವಾಡಗಳು ಅನೇಕ. ತಾತನ ನಾಮ ಸ್ಮರಣೆಯಿಂದಲೇ ಅನೇಕ ಕಷ್ಟಗಳು ದೂರವಾಗುತ್ತವೆ ಎಂದರು. ಸಾಮೂಹಿಕ ವಿವಾಹದಲ್ಲಿ 21 ಜೋಡಿ ನವ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಲತಾ ಆನೆಗುಂದಿ ಪ್ರಾರ್ಥಿಸಿದರು. ಸಂತೋಷ ಆನೆಗುಂದಿ, ಸಿದ್ಧಲಿಂಗಪ್ಪ ಹೊಸಕೇರಿ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಣ್ಣ ಬೆಳಗಾವಿ, ಮಂಜುನಾಥ ಬೆಳಗಾವಿ, ಈರಣ್ಣ ಆಕಳವಾಡಿ, ಶಂಕರ ಕುಂಬಿ, ಮಠದ ಭಕ್ತರು ಉಪಸ್ಥಿತರಿದ್ದರು. ತಾತನ ಮೂರ್ತಿಗೆ ರುದ್ರಾಭಿಷೇಕ: ಭಾನುವಾರ ಬೆಳಗ್ಗೆ 5ಕ್ಕೆ ತಾತನವರ ಗದ್ದುಗೆಗೆ ರುದ್ರಾಭಿಷೇಕ. ನಂತರ ಅಗ್ನಿಕುಂಡ ಕಾರ್ಯಕ್ರಮ. ಪಲ್ಲಕ್ಕಿಉತ್ಸವ, ಆರಾಧನಾ ಮಹೋತ್ಸವ ಜರುಗಿದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 