ಜಾತಿ ಧರ್ಮ ಮೀರಿ ಸಂಭ್ರಮಿಸಿದ ಮಾರಿಕಾಂಬಾ ಜಾತ್ರಾ ಮಹೋತ್ಸವ
Marikamba Jatra festival celebrated across caste and religion
ಮುಂಡಗೋಡ 09: ಪಟ್ಟಣದ ಆರಾಧ್ಯ ದೇವತೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಸಂಭ್ರಮ, ಶ್ರದ್ಧೆ ಹಾಗೂ ಸಾಮಾಜಿಕ ಭಾವೈಕತೆಯೊಂದಿಗೆ ಅದ್ಧೂರಿಯಾಗಿ ನೆರವೇರಿತು. ಜಾತ್ರೆಯಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ವರ್ಗದ ಜನರು ಒಂದಾಗಿ ಪಾಲ್ಗೊಂಡು, ಸೌಹಾರ್ದತೆಯ ಸ್ಪಷ್ಟ ಸಂದೇಶವನ್ನು ಸಾರಿದರು. ದೂರದೂರಿನಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಮಕ್ಕಳು, ಯುವಕರು, ಹಿರಿಯರು ಎನ್ನದೇ ಎಲ್ಲರೂ ಜಾತ್ರೆಯ ಸಂಭ್ರಮದಲ್ಲಿ ತೊಡಗಿಕೊಂಡಿದ್ದು, ಮುಂಡಗೋಡ ಪಟ್ಟಣವೇ ಹಬ್ಬದ ವಾತಾವರಣದಲ್ಲಿ ರಂಗೇರಿತ್ತು. ಜಾತ್ರೆ ಸಮಯದಲ್ಲಿ ವ್ಯಾಪಾರ ಮಳಿಗೆಗಳು, ಆಹಾರ ಮಳಿಗೆಗಳು ಮತ್ತು ಮನರಂಜನಾ ಆಟಿಕೆಗಳು ಜನರನ್ನು ಆಕರ್ಷಿಸಿತು. ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯ ಪ್ರತೀಕವಾಗಿ ಮಾರಿಕಾಂಬಾ ಜಾತ್ರಾ ಮಹೋತ್ಸವವು ಭಾವೈಕತೆಯ ಹಬ್ಬವಾಗಿ ಮೂಡಿ,ಸಮಾಜದ ಏಕತೆಗೆ ಮತ್ತಷ್ಟು ಬಲ ತುಂಬಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 