ವಿದ್ಯಾರ್ಥಿ ನಿಲಯಗಳಲ್ಲಿ ಅವ್ಯವಸ್ಥೆ - ಶಾಸಕರಿಗೆ ಅಸಮಾಧಾನ
MLAs unhappy with chaos in student dormitories
ವಿದ್ಯಾರ್ಥಿ ನಿಲಯಗಳಲ್ಲಿ ಅವ್ಯವಸ್ಥೆ - ಶಾಸಕರಿಗೆ ಅಸಮಾಧಾನ
ಹೂವಿನಹಡಗಲಿ 14: ’ಸಮಾಜ ಕಲ್ಯಾಣ, ಬಿಸಿಎಂ ಇಲಾಖೆಯ ಹಾಸ್ಟೆಲ್ ಗಳಲ್ಲಿ ಅವ್ಯವಸ್ಥೆಯಿಂದ ಕೂಡಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡದೇ ಕಳಪೆ ಆಹಾರ ಪೂರೈಕೆ. ಸ್ವಚ್ಚತೆ ಇಲ್ಲದೆ, ನಿರ್ವಹಣೆ ಕೊರತೆ ಬಗ್ಗೆ ಶಾಸಕ ಕೃಷ್ಣನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ’. ’ಹೊಟ್ಟೆ ತುಂಬಾ ಅನ್ನ ಕೊಡುತ್ತಿಲ್ಲ, ಕಡಿಮೆ ಪ್ರಮಾಣದ ಚಿಕನ್ ನೀಡುತ್ತಾರೆ’ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ. ತಾವು ಅನೀರೀಕ್ಷಿತ ಭೇಟಿ ನೀಡಲಿದ್ದು, ಸಮಸ್ಯೆಗಳು ಕಂಡು ಬಂದಲ್ಲಿ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.ನಗರ ಪ್ರದೇಶಗಳಲ್ಲಿ ಸಾವಯವ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇದ್ದು. ರೈತರು ಸಾವಯವ ಪದ್ಧತಿಯಲ್ಲಿ ಸಿರಿಧಾನ್ಯ, ತರಕಾರಿ, ಹಣ್ಣುಗಳನ್ನು ಬೆಳೆದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುತ್ತೇವೆ. ಈ ಕುರಿತು ರೈತರಲ್ಲಿ ಅರಿವು ಮೂಡಿಸಿ ಎಂದು ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ’ಬಿಸಿಯೂಟ ಯೋಜನೆಯ ಸಾಮಗ್ರಿ ಪೂರೈಕೆಯಲ್ಲೂ ಅಕ್ರಮ ನಡೆದಿದೆ. ಗೋದಾಮು ವ್ಯವಸ್ಥಾಪಕ, ಕೆಲ ಶಿಕ್ಷಕರೂ ಶಾಮೀಲಾಗಿರುವುದರ ಬಗ್ಗೆ ಗೊತ್ತಾಗಿದ್ದುಪ್ರತ್ಯೇಕ ಚರ್ಚಿಸುವೆ ಎಂದು ಬಿಸಿಯೂಟ ಅಧಿಕಾರಿ ಹನುಮಂತಪ್ಪ ಅವರಿಗೆ ಹೇಳಿದರು.ಪಂಚಾಯಿತಿ ತಿಮ್ಮಪ್ಪ ತಾಲ್ಲೂಕು ಆಡಳಿತಾಧಿಕಾರಿ ಮಾತನಾಡಿ, ’ಕೂಸಿನ ಮನೆಗಳಲ್ಲಿ ಮಕ್ಕಳಿಗೆ ಆಹಾರ ನೀಡಬೇಕು. ಅನುದಾನ ಸಾಲದಿದ್ದರೆ ತೆರಿಗೆ ಹಣ ಬಳಸಿಕೊಳ್ಳಬಹುದು ಎಂದರು.ಇಒ ಪರಮೇಶಪ್ಪ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 