ಸಾವಯವ ಕೃಷಿ ಮಾಡಿ ದೇಶವನ್ನು ಸಮೃದ್ಧಿ ಗೊಳಿಸೋಣ - ಗೀರೀಶ್ ತೆಲಸಂಗೆ
Let's make the country prosperous by doing organic farming - Girish Telasange
ಮಾಂಜರಿ 02 : ರೋಗ ಮುಕ್ತ ಭಾರತವನ್ನು ಮಾಡುವುದು ಕೇವಲ ಸಾವಯವ ಕೃಷಿಯಿಂದ ಮಾತ್ರ ಸಾಧ್ಯ ಕೃಷಿ ಕ್ಷೇತ್ರವನ್ನು ಓದ್ಯೋಗಿಕ ಕ್ಷೇತ್ರವಾಗಿ ಬೆಳೆಸೋಣ. ನಮ್ಮ ಪೂರ್ವಜರು ಮಾಡುವ ಗೋ ಆಧಾರಿತ ಸಾವಯುವ ಕೃಷಿಯನ್ನು ಪ್ರಸ್ತುತ ದಿನಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳುವಳಿಕೆ ಗೀರೀಶ್ ತಲಸಂಗೆ ನೀಡಿದರು. ಅವರು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಸೋಮವಾರ ರಂದು ಕೆ. ಎಲ್. ಇ ಸಂಸ್ಥೆಯ ಪದವಿ ಮಹಾವಿದ್ಯಾಲಯ ಅಂಕಲಿಯ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಆರನೇ ದಿನದ ಶ್ರಮದಾನವನ್ನು ಇಂಗಳಿ ಗ್ರಾಮದಲ್ಲಿನ ಜಲಕುಂಭವನ್ನು ಸ್ವಚ್ಛಗೊಳಿಸಲಾಯಿತು.
ಜೊತೆಗೆ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಹಾಗೂ ಗುಡ್ ಟಚ್ ಬ್ಯಾಡ್ ಟಚ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಮಧ್ಯಾಹ್ನದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಗೀರೀಶ್ ತೇಲಸಂಗೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಆರ್. ಎ. ಕೆರಗುಟ್ಟೆಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ದೇಹವು ಸದೃಢವಾಗಿಡಲು ನಾವು ಸಾವಯವ ಕೃಷಿ ಮಾಡಬೇಕು ಎಂದು ತಿಳಿಸಿದರು.ಕು. ಕಾವೇರಿ ಜಡೆಯಪ್ಪಗೋಳ ಸ್ವಾಗತ ಭಾಷಣ ಮಾಡಿದರು. ಎಸ್. ಬಿ. ಬೊಮ್ಮಣ್ಣವರ್, ಕು. ಎಸ್. ಎಸ್. ಚಿಕಲೆ ಉಪಸ್ಥಿತರಿದ್ದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 