ಹೂವಿನ ಹಡಗಲಿ

ಮಾಜಿ ದೇವದಾಸಿಯರಿಗೆ ಕಾನೂನು ಅರಿವು

ಮಾಜಿ ದೇವದಾಸಿಯರಿಗೆ ಕಾನೂನು ಅರಿವು

ಮಾಜಿ ದೇವದಾಸಿಯರಿಗೆ ಕಾನೂನು ಅರಿವು 

ಹೂವಿನಹಡಗಲಿ 9 : ತಾಲ್ಲೂಕಿನ  ಹಿರೇಹಡಗಲಿ ಗ್ರಾಮದ ಡಾ.ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯನಗರ.ದೇವದಾಸಿ ಪುನರ್ವಸತಿ ಯೋಜನೆ ವಿಜಯನಗರ ಜಿಲ್ಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ದೇವದಾಸಿ ಮಹಿಳೆಯರಿಗೆ ಉಚಿತ ಕಾನೂನು ಅರಿವು ಕಾರ್ಯಕ್ರಮ ಜರುಗಿತು.  ಅದ್ಯಕ್ಷತೆ ವಹಿಸಿದ್ದ ಪಂಚಾಯಿತಿ  ಅಧ್ಯಕ್ಷೆ  ವಿದ್ಯಾಶ್ರೀ ಗಂಗಾಧರ್ ಮಾತನಾಡಿ ಸರ್ಕಾರ ಮಾಜಿ ದೇವದಾಸಿ ಮಹಿಳೆಯರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ವಕೀಲರಾದ ಕೊಟ್ರೇಶ್ ಕರ್ಜಗಿ ರವರು ಮಾತನಾಡಿ ದೇವದಾಸಿ ಯರಿಗೆ ಸಿಗುವ ಸೌಲಭ್ಯಗಳನ್ನು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ  ಬಿ.ನಿರ್ಮಾಲ. ಗ್ರಾ. ಪಂ  ಸದಸ್ಯ ಕೆ ಉಚ್ಚೇಂಗೆಪ್ಪ . ಅಂಗನವಾಡಿ ಕಾರ್ಯಕರ್ತೆ .ಮಹಾಲಂಬಿ.  ವಿಶಾಲಾಕ್ಷಿ  ಎಐಟಿಯುಸಿ ಮುಖಂಡರಾದ ಹಲಗಿ ಸುರೇಶ್ ಇದ್ದರು. ಪುನರ ಅನುಷ್ಠಾನ ಅಧಿಕಾರಿ ಎ.ಜಿ.ಹಾಲನಗೌಡ ಸ್ವಾಗತಿಸಿದರು. 


ಸುದ್ದಿ ಓದಿ