ಮೇಕಪ್ ಕ್ಷೇತ್ರದಲಿ ್ಲ‘ಟಿರಾ’ ಹೊಸ ಹೆಜ್ಜೆ - ‘ಪೆಪ್ಟಿಂಟ್’ಲಿಪ್ ಪ್ಲಂಪಿಂಗ್ ಬಿಡುಗಡೆ
La‘Tira’s new step in the makeup field – ‘Peptint’ lip plumping launched
ಮುಂಬೈ 14: ಭಾರತದಲ್ಲಿ ಸೌಂದರ್ಯ ಉತ್ಪನ್ನಗಳಿಗೆ ಖ್ಯಾತವಾಗಿರುವ ರಿಲಯನ್ಸ್ ರಿಟೇಲ್ನ ‘ಟಿರಾ’, ಮೇಕಪ್ ಉತ್ಪನ್ನ ಕ್ಷೇತ್ರದಲ್ಲಿಇದೇ ಮೊದಲ ಬಾರಿಗೆ ತನ್ನ ಸ್ವಂತ ಬ್ರಾಂಡ್ ನಡಿಯಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಅದೀಗ ತುಟಿಯ ಸೌಂದರ್ಯ ಹೆಚ್ಚಿಸುವ ‘ಪೆಪ್ಟಿಂಟ್’ ಎಂಬ ಲಿಪ್ ಪ್ಲಂಪಿಂಗ್ ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಬ್ರಾಂಡ್ ಪೋರ್ಟ್ಫೋಲಿಯೊ ಹೆಚ್ಚಿಸುವಲ್ಲಿ ಹೊಸ ಪ್ರಯತ್ನ ಮಾಡಿದೆ. ಇಟಲಿಯಲ್ಲಿ ರೂಪುಗೊಂಡಿರುವ ಟಿರಾ ಬ್ರಾಂಡ್ನ ಲಿಪ್ ಪ್ಲಂಪಿಂಗ್ ‘ಪೆಪ್ಟಿಂಟ್’ ತುಟಿಗಳ ತಿಳಿ ಬಣ್ಣಗಳ ಪೋಷಣೆಗೆ ಅತ್ಯುತ್ತಮವಾಗಿ ಪರಿಣಮಿಸಲಿದೆ. ಕಾಳಜಿ, ಆಹ್ಲಾದ ಮತ್ತು ಬಣ್ಣಗಳ ಪರಿಪೂರ್ಣ ಸಂಯೋಜನೆಯಾಗಿರುವ ಈ ಲಿಪ್ ಪ್ಲಂಪಿಂಗ್ ಶಿಯಾ ಬೆಣ್ಣೆ, ಮುರುಮುರು ಹಣ್ಣಿನ ಬೆಣ್ಣೆ, ಪೆಪ್ಟೆಡ್ ಸಂಯೋಜನೆ, ಹ್ಯಾಲುರೊನಿಕ್ ಆಮ್ಲ, ವಿಟಮಿನ್ ಸಿ ಮತ್ತು ಇ ಭರಿತವಾಗಿದ್ದು, ತುಟಿಗೆ ಅತ್ಯಗತ್ಯವಾಗಿರುವ ಆಳವಾದ ಮಾಯಿಶ್ಚರೈಸಿಂಗ್ ನೀಡಿ ಚಂದದ ಅಧರಗಳು ದುಂಡಗೆ ಕಾಣುವಂತೆ ಮಾಡುತ್ತದೆ. ‘ಪೆಪ್ಟಿಂಟ್’ನ ಪ್ರತಿ ಬಳಕೆಯ ಬಳಿಕ ಪೇಲವ ತುಟಿಗಳು ನಯವಾಗಿ ತುಂಬಿದಂತೆ ಕಾಣುತ್ತವೆ.
ಇದರ ನಿರಂತರ ಬಳಕೆಯಿಂದ ತುಟಿಗಳಿಗೆ ಹೆಚ್ಚಿನ ಪೋಷಣೆ ಸಿಗುತ್ತದೆ. ಟಿರಾ ‘ಪೆಪ್ಟಿಂಟ್’ನಲ್ಲಿಎರಡು ರೀತಿಯ ಪ್ರಯೋಜನಗಳಿರುವುದು ಇನ್ನೊಂದು ವಿಶೇಷ. ಆಹ್ಲಾದಕರ ಪರಿಮಳವಿರುವ ಈ ಉತ್ಪನ್ನದಲ್ಲಿಸುಧಾರಿತ ಚಿಕಿತ್ಸಾ ಸೂತ್ರವಿದ್ದು, ಇದು ಕ್ರಮೇಣ ತುಟಿಗಳ ಸೂಕ್ಷ ್ಮ ತ್ವಚೆಯನ್ನು ಸಂರಕ್ಷಿಸಿ, ದುರಸ್ತಿಗೊಳಿಸಿ ತುಟಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೊಲಾಜೆನ್ ವರ್ಧಿಸುವ ಪೆಪ್ಟೆ?ಡ್ಗಳು ಮತ್ತು ವಯಸ್ಸಾಗುವಿಕೆಯನ್ನು ಪ್ರತಿರೋಧಿಸುವ ಅಂಶಗಳಿಂದ ಕೂಡಿರುವ ಇದರ ಚಿಕಿತ್ಸಾ ಸೂತ್ರವು ತುಟಿಗಳಲ್ಲಿಯಾವುದೇ ಒಣಗುವಿಕೆ ಮತ್ತು ಶುಷ್ಕತೆ ಇಲ್ಲದಂಥ ತೇವಾಂಶ ನೀಡುತ್ತದೆ. ಲಿಪ್ ಪ್ಲಂಪರ್ನಲ್ಲಿಇಂಥ ಪ್ರಯೋಜನ ಸಿಗುವುದು ಇದೇ ಮೊದಲು ಎಂಬುದು ವಿಶೇಷ. ಆಕರ್ಷಕ ಒಂಬತ್ತು ಶೇಡ್ಗಳಲ್ಲಿಸಿಗುವ ‘ಪೆಪ್ಟಿಂಟ್’ ಲಿಪ್ ಪ್ಲಂಪರ್ ಟಿರಾದ ಸಿಗ್ನೇಚರ್ ಸ್ಲಿಕ್ ಪ್ಯಾಕೇಜಿಂಗ್ನಲ್ಲಿಲಭ್ಯವಿದ್ದು, ಸುಲಭವಾಗಿ ಲೇಪಿಸಲು ಸಾಧ್ಯವಾಗುವ ಮೃದು ಅಪ್ಲಿಕೇಟರನ್ನು ಒಳಗೊಂಡಿದೆ. ಇದರ ಪ್ರತಿ ಶೇಡ್ ಕೂಡ ವಿ?ಗನ್, ಕ್ರೌರ್ಯ ಮುಕ್ತ, ಪ್ಯಾರಬೀನ್ ಮುಕ್ತ ಹಾಗೂ ಖನಿಜ ತೈಲ ಮುಕ್ತವಾಗಿರುವುದು ಮತ್ತೊಂದು ವಿಶೇಷ. ಬಣ್ಣದ ಕಾಸ್ಮೆಟಿಕ್ಸ್ ಕ್ಷೇತ್ರಕ್ಕೆ ಹೊಸ ಹೆಜ್ಜೆ ಇಟ್ಟಿರುವ ಟಿರಾದ ಈ ಹೊಸ ಉತ್ಪನ್ನದ ಪೆಪ್ಟಿಂಟ್ನ ಬೆಲೆ 15 ಗ್ರಾಂಗೆ 675 ರೂ. ಆಗಿದೆ.
ಟಿರಾ ಇನ್ನು ಮುಂದೆಯೂ ಭಾರತೀಯ ಗ್ರಾಹಕರಿಗೆ ಸೂಕ್ತವಾಗುವ ಹಾಗೂ ಸೌಂದರ್ಯ ಪ್ರಸಾಧನಗಳನ್ನು ಸ್ಮಾರ್ಟ, ಸರಳ ಮತ್ತು ಪ್ರಾಯೋಗಿಕವಾಗಿ ಮಾಡುವ ಪ್ರಯತ್ನ ಮಾಡಲಿದೆ. ಟಿರಾ ‘ಪೆಪ್ಟಿಂಟ್’ನ ಪ್ರಮುಖಾಂಶಗಳು: ತುಟಿಗಳಿಗೆ ಆಳವಾದ ತೇವಾಂಶ ನೀಡಿ ಪೋಷಣೆ ಮಾಡುತ್ತದೆ. ಇಟಲಿಯಲ್ಲಿರೂಪುಗೊಂಡಿರುವ ಇದು ಪೆಪ್ಟೆಡ್ ಸಂಯೋಜನೆ ಮತ್ತು ನೈಸರ್ಗಿಕ ಬೆಣ್ಣೆಗಳನ್ನು ಒಳಗೊಂಡಿದೆ.ತುಟಿಗಳು ದುಂಡಗೆ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ.ಇದರ ನಿಯಮಿತ ಬಳಕೆಯು ತುಟಿಗಳನ್ನು ರಕ್ಷಿಸುತ್ತದೆ ಮತ್ತು ದುರಸ್ತಿಗೊಳಿಸುತ್ತದೆ.ಮೃದುವಾಗ ಅಪ್ಲಿಕೇಟರ್ನೊಂದಿಗೆ ಸಿಗುತ್ತದೆ. ವಿಗನ್, ಪ್ಯಾರಬೀನ್ ಮುಕ್ತ, ಕ್ರೌರ್ಯ ಮುಕ್ತ ಮತ್ತು ಖನಿಜ ತೈಲ ಮುಕ್ತವಾದ ಉತ್ಪನ್ನವಿದು. ಟಿರಾದ ‘ಪೆಪ್ಟಿಂಟ್’ನಂಥ ಅನೇಕ ಆಕರ್ಷಕ ಸೌಂದರ್ಯ ಉತ್ಪನ್ನಗಳು ಈಗ ಖಿಡಿಚಿ.ಛಿಠ ಮತ್ತು ನಿಮ್ಮ ಸಮೀಪದ ಟಿರಾ ಮಳಿಗೆಯಲ್ಲಿ ಲಭ್ಯವಿರುತ್ತವೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 