ಕೆಎಎಸ್ ಅಧಿಕಾರಿ ಶಿವಾನಂದ ಕರಾಳೆ ಸನ್ಮಾನ

ಕೆಎಎಸ್ ಅಧಿಕಾರಿ ಶಿವಾನಂದ ಕರಾಳೆ ಸನ್ಮಾನ  KAS Officer Shivananda Karale Felicitated


ನೇಸರಗಿ 15: ಪದೋನ್ನತಿ ಹೊಂದಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಅವರ ಆಪ್ತ ಕಾರ್ಯದರ್ಶಿಯಾಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ ನೇಸರಗಿ ಗ್ರಾಮದ ಕೆಎಎಸ್ ಅಧಿಕಾರಿ ಶಿವಾನಂದ ಬಸವರಾಜ ಕರಾಳೆ ಅವರನ್ನು ಗ್ರಾಮದ  ಚನ್ನವೃಷಭೇಂದ್ರ (ದೇವರಕೊಂಡ) ಅಜ್ಜನವರ ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು ಶಿವಾನಂದ ಕರಾಳೆ ಅವರನ್ನು ಗೌರವಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಅಡಿವಪ್ಪ ಮಾಳಣ್ಣವರ, ಯಲ್ಲಪ್ಪ ರೊಟ್ಟಿ, ಬಸವರಾಜ ಹಿರೇಮಠ, ಮಲ್ಲಿಕಾರ್ಜುನ ಕಲ್ಲೋಳಿ, ಮಲ್ಲೇಶ ಯತ್ತಿನಮನಿ, ಬಸವಂತ ಸೋಮಣ್ಣವರ, ಚನ್ನಬಸಪ್ಪ ರೊಟ್ಟಿ, ರಾಮಣ್ಣ ಹೊಂಡಪ್ಪಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.