ಜ್ಯೋತಿ ಅರ್ಬನ್ ಸೊಸೈಟಿಗೆ 1.58 ಕೋಟಿ ರೂ ಲಾಭ
Jyoti Urban Society earns Rs 1.58 crore profit
ಲೋಕದರ್ಶನ ವರದಿ
ಮೂಡಲಗಿ 12: ಜ್ಯೋತಿ ಅರ್ಬನ್ ಸೊಸೈಟಿಯು ಸನ್ 2025-26 ನೇ ಆರ್ಥಿಕ ವರ್ಷದ ಅಂತ್ಯಕ್ಕೆ 1.58 ಕೋಟಿ ರೂ ಲಾಭ ಗಳಸಿ ಪಥದಲ್ಲಿ ಸಾಗಿದೆ ಎಂದು ಸೊಸೈಟಿ ಅಧ್ಯಕ್ಷ ಮಲ್ಲಪ್ಪಾ ಮದಗುಣಕಿ ಹೇಳಿದರು.
ಅವರು ಪಟ್ಟಣದ ಜ್ಯೋತಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘವು 1.66 ಕೋಟಿ ರೂ ಶೇರು ಬಂಡವಾಳ, 91.22 ಕೋಟಿ ರೂ ಠೇವು, 2.33 ಕೋಟ ರೂ ನಿಧಿಗಳು, 58.11 ಕೋಟಿ ರೂ ಸಾಲಗಳು, 36.88 ಕೋಟಿ ಗುಂತಾವಣಿಗಳು, 101,89 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ 442.88 ಕೋಟಿ ವ್ಯವಹಾರ ಮಾಡಿ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದರು.
ಸೊಸೈಟಿಯ ಉಪಾಧ್ಯಕ್ಷ ಬಸವರಾಜ ನೇಮಗೌಡರ ಮಾತನಾಡಿ, ಸೊಸೈಟಿಯು ಈಗಾಗಲೇ 9 ಶಾಖೆಗಳನ್ನು ಹೊಂದಿದ್ದು, ಮುಂಬರು ದಿನಗಳಲ್ಲಿ ಇನ್ನೂ ಮೂರು ಶಾಖೆಗಳು ಹಾಗೂ ಪ್ರಧಾನ ಕಛೇರಿ ಸ್ವಂತ ಕಟ್ಟಡ ಕಾರ್ಯ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ನಿರ್ದೇಶಕರುಗಳಾದ ಶ್ರೀಶೈಲ್ ಶಿ, ಜೈನಾಪೂರ, ಅಪ್ಪಯ್ಯಪ್ಪ ಬ, ನೇಮಗೌಡರ, ಶ್ರೀಶೈಲ್ ಗಾಣಿಗೇರ, ಮಲ್ಲಪ್ಪ ಗಾಣಿಗೇರ, ಸಂಗಪ್ಪ ಕಾಳಪ್ಪಗೋಳ, ಚಂದ್ರು ಗಾಣಿಗ, ಸಾವಿತ್ರಿ ತೇಲಿ, ಆಶಾ ಗಾಣಿಗೇರ, ಮಂಜುಳಾ ನೇಮಗೌಡರ, ಮುತ್ತಪ್ಪಾ ವರ್ಗಿ ಪ್ರಧಾನ ವ್ಯವಸ್ಥಾಪಕ ಪ್ರಕಾಶ ರಡರಟ್ಟಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 