ಜಗದ್ಗುರು ಸಿದ್ಧಾರೂಢ ಮಹಾಸ್ವಾಮಿಗಳವರ ತೃತೀಯ ವರ್ಷದ ವಾರ್ಷಿಕೋತ್ಸವ, ಜಾತ್ರಾ ಮಹೋತ್ಸವ
Jagadguru Siddharudha Mahaswamy's third year anniversary, fair and festival
ದೇವರ ಹಿಪ್ಪರಗಿ 07: ತಾಲ್ಲೂಕಿನ ಪಡಗಾನೂರ ಗ್ರಾಮದ ಕೈವಲ್ಯ ಆಶ್ರಮ ಸಿದ್ಧಾರೂಢ ಮಠದಲ್ಲಿ, ಪರಮ ಪೂಜ್ಯ ಜಗದ್ಗುರು ಸಿದ್ಧಾರೂಢ ಮಹಾಸ್ವಾಮಿಗಳವರ ಪುಣ್ಯಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ತೃತೀಯ ವರ್ಷದ ವಾರ್ಷಿಕೋತ್ಸವ, ಜಾತ್ರಾ ಮಹೋತ್ಸವ ಹಾಗೂ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಗಳು ಮೇ 11 ಮತ್ತು 12ರಂದು ಅತ್ಯಂತ ವೈಭವದಿಂದಜರುಗಲಿವೆ ಎಂದು ಮಠದ ಅಧಿಪತಿಗಳಾದ ಪ.ಪೂ. ದಯಾನಂದ ಮಹಾಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇತೃತ್ವ ಹಾಗೂ ಪೂಜ್ಯ ಸದ್ಗುರು ಡಾಽಽ ಶಿವಕುಮಾರ ಮಹಾಸ್ವಾಮಿಗಳು ಚಿದಂಬರಾಶ್ರಮ ದಿವ್ಯ ಸಾನ್ನಿಧ್ಯದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 11 ಸೋಮವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧಾರೂಢರ ಮೂರ್ತಿ ಮೆರವಣಿಗೆ, ಕುಂಭ, ಕಳಸ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿಜರುಗಲಿದೆ ಸಾಯಂಕಾಲ 6:00 ರಿಂದರಾತ್ರಿ 8:00 ರವರೆಗೆ ಅಧ್ಯಾತ್ಮಿಕ ಪ್ರವಚನ ನಡೆಯಲಿದ್ದು ಮೇ 12 ಮಂಗಳವಾರ ಮುಂಜಾನೆ ಸಿದ್ಧಾರೂಢ ಮೂರ್ತಿಗೆ ಮಹಾರುದ್ರಾಭಿಷೇಕ, ಮುಂಜಾನೆ 8:00 ರಿಂದ 10:00 ಪ್ರವಚನ ನಡೆಯಲಿದೆ. ಹಾಗೂ ವಿವಿಧಗಣ್ಯರಿಂದತುಲಾಭಾರ ಸೇವೆ ನೆರವೇರಲಿದೆ.
ಪುಣ್ಯ ಕಾರ್ಯಕ್ರಮದಲ್ಲಿ ಪ.ಪೂ. ಸ್ವರೂಪಾನಂದ ಮಹಾಸ್ವಾಮಿಗಳು ಇಂಡಿ, ಪ.ಪೂ. ಶಂಕರಾನಂದ ಮಹಾಸ್ವಾಮಿಗಳು ಆಳೂರ, ಮಾತೋಶ್ರೀ ಯೋಗೇಶ್ವರಿ ತಾಯಿಯವರು ಬುರಣಾಪುರ, ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರು ಚಿಕ್ಕಪಡಸಲಗಿ, ಪ.ಪೂ. ಅದ್ವೈತಾನಂದ ಮಹಾಸ್ವಾಮಿಗಳು ಯರಗಲ್ಲ ಸೇರಿದಂತೆ ಅನೇಕ ಸಾಧು-ಸಂತರು ಪಾಲ್ಗೊಳ್ಳಲಿದ್ದಾರೆ. ಮೇ 11ರಿಂದ ಆರಂಭವಾಗಿರುವ ಪ್ರವಚನ ಮಾಲಿಕೆಯಲ್ಲಿ ಪ.ಪೂ. ಮಾತೋಶ್ರೀ ದ್ರಾಕ್ಷಾಯಣಿ ತಾಯಿಯವರು ಹೂವಿನ ಹಿಪ್ಪರಗಿ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ ವಿಷಯದಕುರಿತು ಪ್ರವಚನ ನೀಡುತ್ತಿದ್ದಾರೆ.
ಸಂಗೀತ ಸೇವೆಯನ್ನು ಮಹಾಂತೇಶ ನಾಗೋಜಿ ಹಾಗೂ ತಬಲಾ ಸೇವೆಯನ್ನು ಸಾಹೇಬಗೌಡ ಮುಳಸಾವಳಗಿ ಮತ್ತುತಂಡದವರು ನಡೆಸಿಕೊಡಲಿದ್ದಾರೆ. ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಪಡಗಾನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಸಿದ್ಧಾರೂಢ ಮಠದ ಭಕ್ತ ಮಂಡಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ 