ಧರ್ಮಟ್ಟಿ ಸೇತುವೆಗೆ ಬಂದೀತೇ ದುರಸ್ಥಿ ಭಾಗ್ಯ?
ಸೇತುವೆ ಕುಸಿದು 6 ತಿಂಗಳಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು
ವರದಿ: ಸುಧೀರ ನಾಯರ್
ಮೂಡಲಗಿ 09: ಮೂಡಲಗಿಯಿಂದ ಯಾದವಾಡಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಬರುವ ಧರ್ಮಟ್ಟಿ ಗ್ರಾಮದ ಸಮೀಪ ಹಳ್ಳಕ್ಕೆ ನಿಮರ್ಿಸಿರುವ ಸೇತುವೆಯೂ ಅರ್ಧಭಾಗ ಕುಸಿದು 5_6 ತಿಂಗಳು ಕಳೆದಿದ್ದು ಸೇತುವೆ ದುರಸ್ಥಿ ಕಾಣದೇ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದಲ್ಲದೇ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ ನಿಮರ್ಾಣವಾಗಿದೆ ಎಂದು ವಾಹನ ಸವಾರರ ಮತ್ತು ಗ್ರಾಮಸ್ತರು ಆರೋಪಿಸುತ್ತಿದ್ದಾರೆ.
ಮೂಡಲಗಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು. ಈ ಸೇತುವೆಯ ಮೇಲೆ ಪ್ರತಿದಿನ ನೂರಾರು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಮೌನವಾಗಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಅಲ್ಲದೇ ಈ ಸೇತುವೆ ನಿಮರ್ಾಣದತ್ತ ಗಮನಹರಿಸುವ ವಾರಸುದಾರರು ಇಲ್ಲವೇ ಎಂಬ ಪ್ರಶ್ನೇ ಸಾರ್ವಜನಿಕರನ್ನು ಕಾಡುತ್ತಿದೆ.
ಸೇತುವೆಯ ಮೇಲೆ ಪ್ರತಿದಿನ ಕಬ್ಬು ಹೇರಿದ ಟ್ರ್ಯಾಕ್ಟರ್, ಸಕರ್ಾರಿ ಬಸ್ಸ್ ಮತ್ತು ನೂರಾರು ವಾಹನಗಳು ಹಾದು ಹೋಗುವುದಲ್ಲದೇ ಈ ರಸ್ತೆಯಲ್ಲಿಯೇ ಪ್ರತಿ ನಿತ್ಯ ನೂರಾರು ಶಾಲಾ ಮಕ್ಕಳು ಸೈಕಲ್ ಮೂಲಕ ಸಂಚರಿಸುತ್ತಾರೆ. ಸೇತುವೆಯ ಅರ್ಧ ಭಾಗ ಕುಸಿದಿರುವುದರಿಂದ ಸವಾರರು ಭಯದಿಂದ ಸಂಚಾರಿಸುವಂತಾಗಿದೆ. ಸೇತುವೆ ಕುಸಿದಿರುವುದರಿಂದ ಹಲವಾರು ಅಪಘಾತಗಳು ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಕಳೆದ 5-6 ತಿಂಗಳ ಹಿಂದೆ ಕಲ್ಲು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲಿಯೇ ಒಬ್ಬರು ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆಯೂ ಸಂಭವಿಸಿದೆ. ಈ ಕುರಿತು ಜಿಲ್ಲಾಧಿಕಾರಿ, ಶಾಸಕರಿಗೆ, ಜಿಲ್ಲಾ ಪಂಚಾಯತಿ ಎಂಜಿನೀಯರ್ಗಳಿಗೆ ಹಲವಾರು ಭಾರಿ ಮನವಿ ಕೊಟ್ಟರು ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನವೀಕರಣಗೂಳಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು. ಮೂಡಲಗಿ ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮದ ವಾಹನ ಸವಾರ, ರೈತರ ಆಗ್ರಹವಾಗಿದೆ.
ಬಾಕ್ಸ್ 1: ನಾನು ಪ್ರತಿನಿತ್ಯ ಈ ಸೇತುವೆಯ ಮೇಲೆ ಸಂಚಾರಿಸುತ್ತೆನೆ. ಸೇತುವೆ ಕುಸಿದು 5-6 ತಿಂಗಳೂ ಕಳೆದರೂ ಇನ್ನೂ ಕಾಮಗಾರಿ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯಯನ್ನು ಎತ್ತಿ ತೋರಿಸುತ್ತಿದೆ. ಈ ಸೇತುವೆಯ ಮೇಲೆ ರಾತ್ರಿ ವೇಳೆ ಸಂಚಾರಿಸುವುದು ಅಪಾಯಕಾರಿಯಾಗಿದೆ. ಜನಪ್ರತಿನಿಧಿಗಳು ಅಪಘಾತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳುವುದು ಒಳ್ಳೆಯದು.
ಗುರುನಾಥ ಗಂಗನ್ನವರ. ಗುಜನಟ್ಟಿ ನಿವಾಸಿ
ಬಾಕ್ಸ್ 2: ಸೇತುವೆ ಕಾಮಗಾರಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ದುರಸ್ಥಿ ಕೆಲಸಕ್ಕೆ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
ಆರ್, ಎ. ಗಾಣಿಗೇರ. ಸಹಾಯಕ ಕಾರ್ಯ ನಿವರ್ಾಹಕ ಅಭಿಯಂತರರು ಗೋಕಾಕ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 