ಇರಾನ್ - ಇಸ್ರೆಲ್ ಯುದ್ಧ: ಇರಾನ್ ನಿಂದ ಅಮದಾಗುತ್ತಿದ್ದ ಡಾಂಬರು ಸ್ತಬ್ಧ : ನಾಗರಾಜ್ ಹರಪನಹಳ್ಳಿ
Iran-Israel war: Asphalt imports from Iran halted: Nagaraj Harapanahalli
ಕಾರವಾರ 09 : ಇರಾನ್ ಮತ್ತು ಇಸ್ರೆಲ್ ಅಮೆರಿಕಾ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಕಾರವಾರ ಬಂದರಿಗೂ ತಟ್ಟಿದೆ. ಮಾರ್ಚ ಒಂದನೇ ತಾರೀಖಿನ ನಂತರ ಇರಾನ್ ನಿಂದ ಅಥವಾ ಪಾಶ್ಚಿಮಾತ್ಯ ಅರಬ್ ದೇಶಗಳಿಂದ ವಿದೇಶಿ ಹಡಗುಗಳು ಕಾರವಾರ ಬಂದರಿಗೆ ಬಂದಿಲ್ಲ. ಇರಾನ್ ದೇಶದಿಂದ ಭಾರತದ ಕಾರವಾರ ಬಂದರಿಗೆ ಸರಕು ಸಾಗಣೆ ಶಿಪ್ ಮೂಲಕ ಅಮದಾಗುತ್ತಿದ್ದ ಡಾಂಬರು ವಹಿವಾಟು ಸಂಪೂರ್ಣ ನಿಂತಿದೆ.ಯುದ್ಧದ ಬಿಸಿ ಕರ್ನಾಟಕದ ಸರ್ವ ಋತು ಬಂದರು ಎಂದೇ ಹೆಸರಾದ ಕಾರವಾರ ಬಂದರು ಇಲಾಖೆಗೆ ತಟ್ಟಿದೆ. ಕಾರವಾರ ಬಂದರಿಗೆ ಬಾರದ ವಿದೇಶಿ ಹಡಗುಗಳು ಸಹ ಮಾರ್ಚ ತಿಂಗಳಲ್ಲಿ ಬಂದಿಲ್ಲ.
ಇದಕ್ಕೆ ಕಾರಣ ಅರಬ್ ದೇಶಗಳಲ್ಲಿ ಮತ್ತು ಇರಾನ್ ಇಸ್ರೇಲ್ ನಡುವಿನ ಕದನ ಕಾರಣ ಎಂದು ಬಂದರು ಅಧಿಕಾರಿಗಳ ಅಂಬೋಣ. ಪ್ರತಿ ತಿಂಗಳು ಸಕರು ಸಾಗಣೆ ವಹಿವಾಟಿನಿಂದ 70 ರಿಂದ 80 ಲಕ್ಷ ರೂ.ಆದಾಯ ಗಳಿಸುವ ಕಾರವಾರ ಸರ್ವರುತು ಬಂದರು ಈಗ ಖಾಲಿ ಬಿದ್ದಿದೆ. ಇರಾನ್ ನಿಂದ ಡಾಂಬರು ಇಲ್ಲಿನ ಬಂದರಿಗೆ ಬರುತ್ತಿತ್ತು. ಈಗ ಅದು ನಿಂತು ಹೋಗಿದೆ. ಮಾರ್ಚನಲ್ಲಿ ಬಂದರು ಆದಾಯ ಮೂರು ಲಕ್ಷ ರೂ.ಗಳಿಗೆ ಸೀಮಿತವಾಗಲಿದೆ. ಡಾಂಬರು ರಸ್ತೆ ನಿರ್ಮಾಣಕ್ಕೆ ಅಗತ್ಯವಾಗಿದ್ದು, ಮಾರ್ಚ ಎಪ್ರಿಲ್ ರಸ್ತೆ ನಿರ್ಮಾಣದ ಅವಧಿಯಾಗಿದೆ. ರಸ್ತೆ ನಿರ್ಮಾಣಕ್ಕೆ ಡಾಂಬರು ಕೊರತೆ ಆಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಬಂದರು ಬಳಿ ಡಾಂಬರು ಸಾಗಾಟಕ್ಕೆ ಬಂದ ಟ್ಯಾಂಕರ್ ಸಾಲಾಗಿ ನಿಂತಿವೆ.
ಕಾರವಾರ ಬಂದರಿನಿಂದ ರಫ್ತಿಗಿಂತ ಅಮುದು ವಹಿವಾಟು ಹೆಚ್ಚು. ಕ್ರೂಡ್ ಆಯಿಲ್ ರಾ್ತದರೆ, ವಿದೇಶಗಳಿಂದ ಸರಕು ಸಾಮಾಗ್ರಿ, ಹೈಸ್ಪೀಡ್ ಡೀಜಲ್, ರಾಕ್ ಪಾಸ್ಪೆಟ್, ಇಂಡಸ್ಟ್ರಿಯಲ್ ಸಾಲ್ಟ್, ಬಿಟುಮಿನ್ ( ಡಾಂಬರು), ಪುಯಲ್ ಆಯಿಲ್, ಪೆಟ್ರೋಲ್, ಎಲ್ ಪಿಎಸ್ ಅಮುದಾಗುತ್ತದೆ. 2024-25 ರಲ್ಲಿ ಹೈಸ್ಪೀಡ್ ಡೀಜಲ್ 60 550 ಮೆಟ್ರಿಕ್ ಟನ್ , ರಾಕ್ ಪಾಸ್ಪೆಟ್ 44000 ಎಂಟಿ, ಇಂಡಸ್ಟ್ರಿಯಲ್ ಸಾಲ್ಟ್ 1,17,760, ಬಿಟುಮಿನ್ ( ಡಾಂಬರು) 3,02, 742, ಪುಯಲ್ ಆಯಿಲ್ 9,977, ಪ್ರೊಟ್ರಾಟಾಲ್ , ಎಲ್ ಪಿಎಸ್ 987 ಮೆಟ್ರಿಕ್ ಟನ್ಸ ಅಮುದಾಗಿತ್ತು. ಒಟ್ಟು ಅಮುದು 5, 45,548 ಮೆಟ್ರಿಕ್ ಟನ್ ಪ್ರಮಾಣದಲ್ಲಿತ್ತು. ರಫ್ತು ಪ್ರಮಾಣ 4594 ಮೆಟ್ರಿಕ್ ಟನ್ ಆಗಿತ್ತು. ಈಗ ಇರಾನ್ - ಇಸ್ರೇಲ್ ಅಮೆರಿಕಾ ನಡುವಿನ ಯುದ್ಧದ ಪರಿಣಾಮವಾಗಿ ಕಾರವಾರ ಬಂದರು ಬಿಕೋ ಎನ್ನುತ್ತಿದೆ. .......
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 