ಕಿತ್ತೂರ ರಾಣಿ ಚನ್ನಮ್ಮ ಮೂರ್ತಿ ಅನಾವರಣ ಸಮಿತಿ ರಚನೆಗೆ ಆಹ್ವಾನ
Invitation to form a committee to unveil the statue of Kittur Rani Channamma
ವಿಜಯಪುರ 23: ಐತಿಹಾಸಿಕ ಪ್ರವಾಸಿ ತಾಣ ವಿಜಯಪುರ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಕಳೆದ ಮೂರು ವರ್ಷಗಳಿಂದ ರಾಷ್ಟ್ರಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮಳ ಮೂರ್ತಿ ಮುಸುಕುಧಾರಿಯಾಗಿ ಅನಾವರಣಗೊಳ್ಳದೆ ಮೂಕ ರೋಧನೆಗ್ಯಯುತ್ತಿದೆ. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ವೀರ ಮಹಿಳೆಯ ಮೂರ್ತಿಯೇ ಮುಸುಕಿನಿಂದ ಸ್ವತಂತ್ರ್ಯವಿಲ್ಲದೇ ನಿಂತಿರುವುದು ವಿಪರ್ಯಾಸ ಮತ್ತು ದುರದೃಷ್ಟಕರ ಸಂಗತಿ. ಈಗಾಗಲೇ ಈ ಕುರಿತು ಹಲವಾರು ಜನ ಹಲವಾರು ರೀತಿ. ಸುದ್ದಿ ಮಾದ್ಯಮಗಳ ಮೂಲಕ ಗಮನ ಸೆಳೆದರು. ಸಂಬಂಧಿಸಿದವರು ಮಾತ್ರ ತಮಗೇ ಸಂಬಂಧವಿಲ್ಲದಂತೆ ಕ್ಯಾರೆ ಎನ್ನದೆ ಮೌನಕ್ಕೆ ಶರಣಾಗಿದ್ದಾರೆ. ಇಲ್ಲಿ ಕೆಲವರಿಗೆ ಸ್ವ ಪ್ರತಿಷ್ಠೆ ಅಡ್ಡ ಬರುತ್ತಿದ್ದು. ಮೂರ್ತಿ ಅನವರಣ ವಿಷಯವನ್ನು ವಿನಾಕಾರಣ ರಾಜಕೀಯ ಗೊಳಿಸಲಾಗುತ್ತಿದೆ. ಕಿತ್ತೂರು ರಾಣಿ ಚೆನ್ನಮ್ಮರ ಜನ್ಮ ಜಯಂತಿ ಹಾಗೂ ವಿಜಯೂತ್ಸವದ ಪೂರ್ವ ಭಾವಿ ಸಭೆಯಲ್ಲಿ ಈ ಕುರಿತು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭೆಯಲ್ಲೂ ಚರ್ಚೆ ನಡೆಸಿದಾಗ. ಕೆಲವರು ಎಂಟ-ಹತ್ತು ದಿನಗಳ ಗಡುವು ಕೇಳಿದ್ದರು.
ಅದೂ ಕೂಡಾ ಮುಗಿದು ಹೋಗಿದ್ದು. ಈ ಕುರಿತು ಯಾರೊಬ್ಬರೂ ವಿವರಣೆ ನೀಡುತ್ತಿಲ್ಲ. ಕಾರಣ ಈಗಾಗಲೇ ಮಾದ್ಯಮಗಳ ಮೂಲಕ ಡಿಸೆಂಬರ್ 31 ರ ವರೆಗೆ ಮೂರ್ತಿ ಅನಾವರಣಕ್ಕೆ ಕಾಲಾವಕಾಶ ನೀಡಲಾಗಿದೆ. ಜನೆವರಿ 01-2026 ರಂದು ಕೆಲವು ರಾಣಿ ಚನ್ನಮ್ಮನ ಅಭಿಮಾನಿಗಳು ಮೂರ್ತಿ ಅನಾವರಣಕ್ಕೆ ಸಜ್ಜಾಗಿದ್ದು. ನಾಗರಿಕರ ಸಮಿತಿ ರಚನೆಗೆ ಮುಂದಾಗಿದ್ದಾರೆ. ಕಾರಣ ವೀರ ರಾಣಿ ಕಿತ್ತೂರು ಚನ್ನಮ್ಮನ ಅಭಿಮಾನಿಗಳು, ಮಹಿಳೆಯರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳ, ನಾಗರಿಕರ ಸಮಿತಿ ರಚಿಸಿ. ಸಲಹೆ ಸೂಚನೆ ಮಾರ್ಗದರ್ಶನ ಪಡೆಯಲಾಗುತ್ತದೆ. ಕಾರಣ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 