ಅನೈತಿಕ ಸಂಬಂಧದಲ್ಲಿನ ಲೈವ್ ವಿಡಿಯೋ ಮಾಡಿ ಗೃಹಿಣಿ ಅತ್ಮಹತ್ಯೆ
Housewife commits suicide after live-streaming an illicit affair
ಬಳ್ಳಾರಿ 23: ನಗರದ ಹುಸೇನ್ ನಗರದಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆ, ಗಂಡನಿಂದ ಡೈವರ್ಸ್ ಪಡೆದು ಕೊಂಡಿದ್ದಳು. ಆಕೆ ವಿವಾಹಿತ ಪುರುಷನ ಜೊತೆಗೆ ಸಂಬಂಧ ಇಟ್ಟು ಕೊಂಡಿದ್ದಳು. ಇದೀಗ ಆತನೂ ಕೂಡ ಕೈಕೊಟ್ಟ ಹಿನ್ನೆಲೆ ಆತನ ಮತ್ತು ಇತರೆ ವ್ಯಕ್ತಿಗಳ ಹೆಸರು ಹೇಳುತ್ತಾ ವಿಡಿಯೋ ಮಾಡುತ್ತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೊನ್ನೆ ನಡೆದಿದೆ.ತನಗಾದ ಅನ್ಯಾಯವನ್ನು ಹೇಳುತ್ತಲೇ ಬಳ್ಳಾರಿಯ ಈ ಗೃಹಿಣಿ ನೇಣಿಗೆ ಶರಣಾಗಿರೋ ವಿಡಿಯೋ ಬೆಚ್ಚಿ ಬೀಳುವಂತಿದೆ.ವಿಡಿಯೋ ಮಾಡುತ್ತಲೇ ಹ್ಯಾಂಗ್ ಮಾಡಿಕೊಂಡಿದ್ದಾಳೆ ಮುನ್ನಿ (24) ಕಳೆದೊಂದು ವರ್ಷದ ಹಿಂದೆ ಗಂಡನಿಂದ ಡೈವರ್ಸ್ ಪಡೆದು ಒಂಟಿಯಾಗಿರುತ್ತಿದ್ದಳು.
ಈ ಮಧ್ಯೆ ದೂರದ ಸಂಬಂಧಿಯಾಗಿದ್ದ ಮಹಮ್ಮದ್ ಶೇಕ್ಷಾವಲಿ ಎನ್ನುವ ವಿವಾಹಿತ ಪುರುಷನ ಜೊತೆಗೆ ಸ್ನೇಹ ಬೆಳೆದಿತ್ತು. ಸ್ನೇಹ ಸಂಬಂಧಕ್ಕೆ ತಿರುಗಿತ್ತು.ಅದ್ರೇ ಇತ್ತೀಚಿಗೆ ಮಹಮ್ಮದ್ ಶೇಕ್ಷಾವಲಿ ಹಾಗೂ ಮುನ್ನಿ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟಟಿತು. ಅಗಾಗ ಗಲಾಟೆಯೂ ಅಗ್ತಿತ್ತು. ಇದೇ ಕಾರಣಕ್ಕೆ ಮುನ್ನಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.ಗಂಡ ಇಲ್ಲದ ಮುನ್ನಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡ್ತಿದ್ದಳು. ಜೊತೆಗೆ ಮನೆ ಮನೆಗೆ ಹೋಗಿ ಮೆಹಂದಿ ಹಾಕೋದು ಸೇರಿದಂತೆ ಮಧು ಮಕ್ಕಳನ್ನು ಮದುವೆಗೆ ತಯಾರಿ ಮಾಡುವ ಕೆಲಸ ಮಾಡ್ತಿದ್ದಳು. ಇರೋದ್ರಲ್ಲಿ ನೆಮ್ಮದಿಯಾಗಿದ್ದ ಮುನ್ನಿ ಎರಡನೇ ಮದುವೆ ಮಾಡಲು ಮನೆಯಲ್ಲಿ ಸಿದ್ಧತೆ ನಡೆದಿತ್ತು.
ಅದ್ರೇ ಶೆಕ್ಷಾವಲಿ ಜೊತೆಗೆ ಇರೋ ಸಂಬಂಧ ಮುಳುವಾಗಿ ಸಾಯುವ ಹಂತಕ್ಕೆ ಬಂದಿದೆ. ಮೊನ್ನೆ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.ವಿಷಯ ತಿಳಿದ ಕೂಡಲೇ ಗಾಂಧಿ ನಗರ ಠಾಣೆಗೆ ಅಗಮಿಸಿದ ಶಾಸಕ ಭರತ್ ರೆಡ್ಡಿ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ತಲೆಮರೆಸಿಕೊಂಡಿರೋ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 