ಅಡುಗೆ ಸಿಬ್ಬಂದಿಗಳಿಗೆ ಬಿಸಿಊಟದ ತರಬೇತಿ
Hot meal training for kitchen staff
ಯಮಕನಮರಡಿ 12 : ಹುಕ್ಕೇರಿ ತಾಲೂಕಿನಲ್ಲಿ ಅಡುಗೆ ಸಹಾಯಕಿಯರು ವಾರದ ಆರು ದಿನಗಳ ಕಾಲ ಶಾಲಾ ಮಕ್ಕಳಿಗೆ ನಾನಾ ರೀತಿಯ ಪೌಷ್ಠಿಕ ಆಹಾರವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಹುಕ್ಕೇರಿ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಹಲಕಿ ಹೆಳಿದರು.
ಸ್ಥಳಿಯ ಬಿ.ಬಿ ಹಂಜಿ ಸಮುದಾಯ ಭವನದಲ್ಲಿ ನಡೆದ ಹತ್ತರಗಿ ಸುತ್ತಮುತ್ತಲಿನ ನಾಲ್ಕು ಕ್ಲಸ್ಟರ ಮಟ್ಟದ ಪ್ರಧಾನ ಮಂತ್ರೀ ಪೋಷಣ ಶಕ್ತಿ ನಿರ್ಮಾಣ(ಮದ್ಯಾಹ್ನ ಉಪಹಾರ ಯೋಜನೆ) ಅಡಿಯಲ್ಲಿ ಅಡುಗೆ ಸಿಬ್ಬಂದಿ ಆಯೋಜಿಸಲಾಗಿದ್ದ ತರಬೇತಿ ಹಾಗೂ ಅಡುಗೆ ಸ್ಪರ್ದೇಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬಿಸಿಯೂಟ ಪ್ರತಿ ಮಗುವುಗೂ ತಲುಪುವಂತೆ ನೋಡಿಕೊಳ್ಳುವಲ್ಲಿ ಅಡುಗೆ ಸಹಾಯಕಿಯರ ಪಾತ್ರ ದೊಡ್ಡದು. ಅಡುಗೆ ಮಾಡುವ ಸಂದರ್ಬದಲ್ಲಿ ಯಾವುದೇ ಅನಾಹುತ ಸಂಬವಿಸದಂತೆ ಅವರು ಜಾಣ್ಮೇಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಪ್ರೋತ್ಸಾಹಿಸಲು ವರ್ಷದಲ್ಲಿ ಎರಡು ಬಾರಿ ಇಂತಹ ಕಾರ್ಯಾಗಾರ ಹಾಗೂ ಸ್ಪರ್ದೇಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸವಿತಾ ಹಲಕಿತಿಳಿಸಿದರು. ಹತ್ತರಗಿ ವಲಯದ ಸುಮಾರು 255 ಸಿಬ್ಬಂದಿ ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಬದಲ್ಲಿ ಹತ್ತರಗಿ ಅಗ್ನಿ ಶಾಮಕ ಠಾಣಾಧಿಕಾರಿ ವೈ ಜಿ ಕೋಲಕರ ಬಾಗವಹಿಸಿ ಅಡುಗೆ ಮನೆಯಲ್ಲಿ ಪಾಲಿಸಬೇಕಾದ ಮುನ್ನೆಚ್ಚೆರಿಕೆ ಕ್ರಮಗಳನ್ನು ತಿಳಿಸಿದರು. ಇದೇ ಸಂದರ್ಬದಲ್ಲಿ ಅಡುಗೆ ಸಹಾಯಕಿಯರಿಗೆ ರುಚಿಕರ ಅಡುಗೆ ಸ್ಪರ್ದೇ ಏರಿ್ಡಸಲಾಗಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಎ ಎಸ್ ಪದ್ಮನ್ನವರ, ಸಿಡಿಪಿಒ ಅಧಿಕಾರಿ ಕಮಲಾ ಹಿರೇಮಠ, ತೋಟಗಾರಿಕೆ ಅಧಿಕಾರಿ ರಾಹುಲ ನಾಶಿಪುಡಿ ಹಾಗೂ ನಾನಾ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 