ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸನ್ಮಾನ
Honors to female students of Government First Grade College
ಲೋಕದರ್ಶನ ವರದಿ
ಸಂಕೇಶ್ವರ 06: ಅನ್ನಪೂರ್ಣ ನಿರ್ವಹಣಾಶಾಸ್ತ್ರ ಸಂಶೋಧನಾ ಸಂಸ್ಥೆಯವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಅನ್ನಪೂರ್ಣ ಮಾನಿನಿ ಪ್ರಶಸ್ತಿ ಹಿ 2026ರ ಅಂಗವಾಗಿ ಮೂಡಲಗಿಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 15 ವಿದ್ಯಾರ್ಥಿನಿಯರನ್ನು ಅವರ ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಬಿ.ಎಸ್ಸಿ ವಿಭಾಗದ ಶ್ರೀನಿಧಿ ಸಣ್ಣಕ್ಕಿ, ವರ್ಷಾ ಪತ್ತಾರ, ಪೂಜಾ ಪುರಾಣಿಕ, ಬಿ.ಬಿ.ಎ ವಿಭಾಗದ ಪ್ರೇಮಾ ಬೋರನಟ್ಟಿ, ಕಾವೇರಿ ಬೋರನಟ್ಟಿ, ಅಶ್ವಿನಿ ದಡ್ಡನ್ನವರ, ಬಿ, ಕಾಂ ವಿಭಾಗದ ಸಂಗೀತಾ ತೇರದಾಳ, ಲಕ್ಷ್ಮೀ ಕುಲಗೋಡ, ಸವಿತಾ ಮೂಡಲಗಿ, ಬಿ. ಎಸ್. ಡಬ್ಲ್ಯೂ ವಿಭಾಗದ ರಕ್ಷಿತಾ ಬೂದಿಗೊಪ್ಪ, ಅಮೃತಾ ವಿಜಯನಗರ, ಕೀರ್ತನಾ ಪಲ್ಲೇದ, ಬಿ. ಎ. ವಿಭಾಗದಲ್ಲಿ ವಿದ್ಯಾಶ್ರೀ ಬಸ್ತವಾಡ, ದೀಪಾ ಹುಲಕುಂದ, ರೇಷ್ಮಾ ಮಾದರ ಗೌರವಕ್ಕೆ ಭಾಜನರಾಗಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಗಾಯತ್ರಿ ಸಾಳೋಖೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇವರ ಈ ಸಾಧನೆಗೆ ಮಹಾವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಬಾಲಚಂದ್ರ ಜಾರಕಿಹೊಳಿ, ಸರ್ವ ಸದಸ್ಯರು, ಪ್ರಾಂಶುಪಾಲರಾದ ಶ್ರೀಯುತ ಮಹೇಶ ಕಂಬಾರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಕೋರಿರುತ್ತಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 