ಹೂವಿನ ಹಡಗಲಿ

ಹೊಳಗುಂದಿ : ಸಿದ್ದೇಶ್ವರ ಸ್ವಾಮಿಯ ಸಂಭ್ರಮದ ರಥೋತ್ಸವ

ಹೊಳಗುಂದಿ : ಸಿದ್ದೇಶ್ವರ ಸ್ವಾಮಿಯ ಸಂಭ್ರಮದ ರಥೋತ್ಸವ

ಹೂವಿನಹಡಗಲಿ   02:  ತಾಲೂಕಿನ ಹೊಳಗುಂದಿ ಗ್ರಾಮದ ಆರಾದೈ ದೈವ ಸಿದ್ದೇಶ್ವರ ಸ್ವಾಮಿಯ ರಥೋತ್ಸವ  ಶುಕ್ರವಾರ ಸಂಜೆ 5.30ಕ್ಕೆ ವಿಜೃಂಭಣೆಯಿಂದ ಜರುಗಿತು.ಬೆಳಿಗ್ಗೆ ಯಿಂದಲೇ ವಿಶೇಷ ಪೂಜೆ , ಧಾರ್ಮಿಕ ಕಾರ್ಯ ಕ್ರಮಗಳು ಜರುಗಿದವು. ದೇವಸ್ಥಾನದಿಂದ ಅಲಂಕೃತ ಪಲ್ಲಕ್ಕಿಯ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿ  ಮೂರು ಸುತ್ತ ಪ್ರದಕ್ಷಿಣೆ ನಂತರ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.ಮಹಾಮಂಗಳಾರತಿ ಬಳಿಕ ಭಕ್ತರ ಜಯಘೋಷ, ಹರ್ಷೋದ್ಘಾರದ ನಡುವೆ ರಥೋತ್ಸವ ಚಾಲನೆ ಪಡೆದುಕೊಂಡಿತು.ಸಮಾಳ, ನಂದಿಕೋಲು,ಮಂಗಳವಾದ್ಯಗಳು   ಮೆರಗು ತಂದವು. ರಥ ಬೀದಿಯಲ್ಲಿ ನೆರೆದಿದ್ದ ಜನರು ರಥಕ್ಕೆ ಉತ್ತತ್ತಿ ಎಸೆದು ಭಕ್ತಿಯಿಂದ ಕೈ ಮುಗಿದರು.ಇದಕ್ಕೂ ಮುನ್ನ ಸ್ವಾಮಿಯ ನಿಶಾನೆ ನಿವೃತ್ತ ಪ್ರಾಚಾರ್ಯ  ಎಂ.ಎಂ.ಗುರುಬಸವರಾಜ ಅವರ ಪುತ್ರ ರಾಘವೇಂದ್ರ ರಾಘವೇಂದ್ರ ಅವರಿಗೆ  ? 1.15101 ರೂ.ಹಾರಜು ಪಡೆದರು.   ಟ್ರಸ್ಟ್‌ ಕಮಿಟಿ ಅದ್ಯಕ್ಷ ಎಸ್‌. ಮಹೇಶ್ವರ​‍್ಪ ,ಪದಾಧಿಕಾರಿಗಳು,ಜನ ಪ್ರತಿನಿಧಿಗಳು, ಗ್ರಾಮಸ್ಥರು  ಹಾಗೂ ಹೂವಿನಹಡಗಲಿ, ಉತ್ತಂಗಿ.ಇಟ್ಟಗಿ,  ನಂದಿಹಳ್ಳಿ ಮೊರಗೇರಿ, ಹಗರಿಬೊಮ್ಮನಹಳ್ಳಿ.  ಸೇರಿದಂತೆ  ಅಪಾರ ಜನರು ಭಾಗವಹಿಸಿದ್ದರು. 


ಸುದ್ದಿ ಓದಿ