ಹೃದಯಾಘಾತದಿಂದ ಮೃತಪಟ್ಟ ವೀರಯೋಧ ಮಹಾಂತೇಶ ಪಾಟೀಲ
Hero Mahantesh Patil dies of heart attack
ಹೃದಯಾಘಾತದಿಂದ ಮೃತಪಟ್ಟ ವೀರಯೋಧ ಮಹಾಂತೇಶ ಪಾಟೀಲ
ನೇಸರಗಿ 10: ಸಮೀಪದ ಮೊಹರೆ ಗ್ರಾಮದ ನಿವಾಸಿ ಭಾರತೀಯ ಸೇನೆಯಲ್ಲಿದ್ದ ವೀರಯೋಧ ಮಹಾಂತೇಶ ಚಂದ್ರ್ಪ ಪಾಟೀಲ(40) ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದ ಪ್ರಯುಕ್ತ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬುಧುವಾರ ನಡೆಯಿತು.
ಕಳೆದ 17 ವರ್ಷಗಳಿಂದ ಸೇನೆಯಲ್ಲಿದ್ದ ಅವರು ಪಶ್ಚಿಮ ಬಂಗಾಳದ ಪಾನಾಗಡ ಜಿಲ್ಲೆಯ ದುರ್ಗಾಪೂರದ ಬೆಟಾಲಿಯನ್ ಸಿಎಂಪಿ 59 ರೆಜಿಮೆಂಟದಲ್ಲಿ ಸೇವೆಯಲ್ಲಿದ್ದರು. ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದು ಅವರ ಪಾರ್ಥಿವ ಶರೀರವನ್ನು ಸಕಲ ಗೌರವಗಳೊಂದಿಗೆ ಗ್ರಾಮದ ಪ್ರಮುಖ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಸುಬೇದಾರ ಸಂತೋಷ ಗುರವ, ನೇಸರಗಿ ಪಿಎಸ್‌ಐ ಈರ್ಪ ರಿತ್ತಿ, ಮೊಹರೆ ಮಾಜಿ ಸೈನಿಕ ಸಂಘದ ಅಧ್ಯಕ್ಷ ಸಾಯಲ್ಲಪ್ಪ ತಳವಾರ, ಸುಬೇದಾರ ಸುರೇಶ ಬರಗಾಲಿ, ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಸಪ್ಪ ತಳವಾರ, ದೇಶನೂರ ಮಾಜಿ ಸೈನಿಕ ಸಂಘದ ಅಧ್ಯಕ್ಷ ಮಲ್ಲಪ್ಪ ಕೇದಾರಿ, ನೇಸರಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರ್ಪ ಸೋಮಣ್ಣವರ ಪಾಲ್ಗೊಂಡಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 