ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
Health Resolution Program
ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ತಾಳಿಕೋಟಿ 10: ಶ್ರೀ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆ ಬಿಜಿಸಿ ಟ್ರಸ್ಟ್ ಸಿಂದಗಿ ವತಿಯಿಂದ ಕಲಕೇರಿ ವಲಯದ ಕನ್ನಡ ಗಂಡು ಮಕ್ಕಳಶಾಲೆ ಯಲ್ಲಿ ಮಂಗಳವಾರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲೆಯಮುಖ್ಯ ಗುರುಗಳು ವಲಯದ ಮೇಲ್ವಿಚಾರಕರಾದ ಸಿದ್ಲಿಂಗಪ್ಪ ಪಾಟೀಲ ಅವರು ಸೇವಾಪ್ರತಿನಿಧಿ ಸ್ವಪ್ನ ಮಾದರ ಸವಿತಾ ಮನಗೂಳಿ ಒಕ್ಕೂಟ ಅಧ್ಯಕ್ಷರಾದ ಪ್ರವೀಣ್ ಜಗಶೆಟ್ಟಿ ಸಂಪನ್ಮೂಲ ವ್ಯಕ್ತಿಯಾದ ಸುಧಾಕರ್ ಅಡಕಿ ಇವರು ಮಕ್ಕಳಿಗೆ ದುಷ್ಟ ಚಟಗಳಿಂದ ದೂರ ಇರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಶ್ರೀಶೈಲ ನಾಯ್ಕೋಡಿ. ಸಿ.ಆರ್.ಪಿ. ಈ ಸಂದರ್ಭದಲ್ಲಿ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಅದು ಪಾಲಕರ ಕೆಲಸ ನಮ್ಮ ಕೆಲಸ ಎಂದು ಏಕೆ ಅಂದರೆ ಈಗಿನ ಕಾಲದ ಮಕ್ಕಳು ಅನೇಕ ದುಷ್ಟ ಚಟಗಳನ್ನು ಮಾಡಿ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳಬಾರದು, ದುಶ್ಚಟಗಳಿಂದ ದೂರ ಇದ್ದು ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು ತಿಳಿಸಿದರು. ಜೆ.ಬಿ.ಕುಲಕರ್ಣಿ ಶಾಲೆಯ ಮುಖ್ಯ ಗುರುಗಳು, ಎಸ್.ಟಿ. ಕೋಳೂರು ಮೇಡಂ,ಸಜ್ಜನ್ ಮೇಡಂ. ಹಾಗೂ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 