ಆರೋಗ್ಯ ಇಲಾಖೆಯ ನೌಕರರು ಹಾಗೂ ವೈದ್ಯಾಧಿಕಾರಿಗಳ ಮುಷ್ಕರ
Health Department employees and medical officers go on strike
ಜಮಖಂಡಿ 28 : ತಾಲೂಕಾ ಆರೋಗ್ಯ ಇಲಾಖೆ, ವೈದ್ಯಾಧಿಕಾರಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘ, ವೈದ್ಯಾಧಿಕಾರಿಗಳ ಸಂಘದ ಸಹಯೋಗದಲ್ಲಿ ಮಾ 11 ರಿಂದ ಅನಿರ್ಧಿಷ್ಠಾವಧಿಯ ಮುಷ್ಕರ ನಡೆಸಲಾಗುವದೆಂದು ತಾಲೂಕಾ ಆರೋಗ್ಯ ಇಲಾಖೆಯ ಅಧಿಕಾರಿ ಗೈಬುಸಾಬ ಗಲಗಲಿ ಅವರು ಹೇಳಿದರು.
ನಗರದ ತಾಲೂಕಾಡಳಿತ ಸೌಧದ ಆವರಣದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹಾಗೂ ತಹಸೀಲ್ದಾರ ಅನೀಲ ಬಡಿಗೇರ ಅವರಿಗೆ ಪ್ರತ್ಯೇಕವಾಗಿ ಮನವಿ ಸಲಿಸಿದರು. ನಂತರ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ನೌಕರರು ಹಾಗೂ ವೈದ್ಯಾಧಿಕಾರಿಗಳ ನ್ಯಾಯಯುತ ನಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಲಾಗುತ್ತಿದ್ದು. ಮಾ 11 ರಿಂದ 15 ವರೆಗೆ ಐದು ದಿನಗಳವರೆಗೆ ಕಪ್ಪು ಬಟ್ಟೆ ಧರಿಸಿ ತುರ್ತು ಸೇವೆಗಳನ್ನು ಒದಗಿಸಲಾಗುವದು, ಮಾ 16 ರಿಂದ ಬೇಡಿಕೆಗಳು ಈಡೇರುವ ವರೆಗೆ ಕರ್ತವ್ಯಕ್ಕೆ ಹಾಜರಾಗದೇ ಅನಿರ್ಧಿಷ್ಠಾವಧಿಯ ಮುಷ್ಕರ ನಡೆಸಲಾಗುವದೆಂದು ಎಂದರು.
ಇದೇ ಸಂದರ್ಭದಲ್ಲಿ ಡಾ.ಕೃಷ್ಣಾ ಬಣ್ಣದ, ಮುಖ್ಯ ವೈದ್ಯಾಧಿಕಾರಿ ಡಾ.ವಾಸಪ್ಪ ಮುದಿಗೌಡರ, ಡಾ.ಮುಕುಂದ ಕಾಂಬಳೆ, ಸಿಬ್ಬಂದಿಗಳಾದ ನರೇಂದ್ರಕುಮಾರ ನಿಡೋಣಿ, ಅನೀಲಕುಮಾರ ಸುರಗೊಂಡ, ಉಮೇಶ ಜೋಶಿ, ಸಂತೋಷ ನಾಯಕ, ರವಿ ಕಾಂಬಳೆ, ಜಾಕೀರ ನದಾಫ, ಜೆ,ಡಿ.ಧನ್ನೂರ, ಲಲಿತಾ ಗಲಗಲಿ, ಜಗದೀಶ ಆಲಕನೂರ, ಶಶಿಕಾಂತ ಮಾಲಗತ್ತಿಮಠ, ವಿಶ್ವನಾಥ ಹರಿಜನ, ಬಾಣಪ್ಪ ನಾಗಠಾಣ, ಗಂಗಾಧರ ಚಾಬುಕಸವಾರ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 