ದಲಿತರ ಮೇಲಿನ ದೌರ್ಜನ್ಯ ಘಟನೆಗಳನ್ನು ಸಿ ಐ ಡಿ ತನಿಖೆಗೆ ಕೊಡಿ : ಪ್ರಭುರಾಜ್ ಕೂಡ್ಲಿ ಆಗ್ರಹ

ದಲಿತರ ಮೇಲಿನ ದೌರ್ಜನ್ಯ ಘಟನೆಗಳನ್ನು ಸಿ ಐ ಡಿ ತನಿಖೆಗೆ ಕೊಡಿ :  ಪ್ರಭುರಾಜ್ ಕೂಡ್ಲಿ ಆಗ್ರಹ   Hand over cases of atrocities against Dalits to the CID for investigation: Prabhuraj Koodli demands


ಬಳ್ಳಾರಿ ಸೆ 22 :  ಇತ್ತೀಚೆಗೆ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಘಟನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಇದು ಖಂಡನೀಯ ಸಂಗತಿಯಾಗಿದೆ ಸರ್ಕಾರ ಕೂಡಲೇ ಇಂತಹ ದುರ್ಘಟನೆಗಳ ಕುರಿತು ಸಿಐಡಿ ತನಿಖೆಗೆ ಆದೇಶಿಸಬೇಕೆಂದು ಕರ್ನಾಟಕ ಪ್ರದೇಶ ಮಾದಿಗರ ಸಂಘದ ರಾಜ್ಯಾಧ್ಯಕ್ಷ ಪ್ರಭುರಾಜ್ ಕೂಡ್ಲಿ ಆಗ್ರಹಿಸಿದರು. ಈ ಕುರಿತು ಅವರು  ನಗರದ ಪತ್ರಿಕಾ ಭವನದಲ್ಲಿ ಮಂಗಳವಾರದಂದು ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ರಾಜ್ಯದ ಚಿತ್ರದುರ್ಗ ಬಳ್ಳಾರಿ ರಾಯಚೂರು ಜಿಲ್ಲೆ ಸೇರಿದಂತೆ ಮೂರು ತಿಂಗಳಲ್ಲಿ 12 ಜನ ದಲಿತರ ಮೇಲೆ ಅಪಹರಣ ಅತ್ಯಾಚಾರ ಮತ್ತು ಕೊಲೆಗಳು ಅಂತ ದುರ್ಘಟನೆಗಳು ಜರುಗಿವೆ.

ಎಂದರೆ ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಗೃಹ ಸಚಿವ ಒಬ್ಬ ದಲಿತರಾಗಿ ಇಂತ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದೆ ನಿರ್ಲಕ್ಷ್ಯ ವಹಿಸಿರುತ್ತಾರೆ ಎಂದು ಪ್ರಭುರಾಜ್ ಅಸಮಾಧಾನವನ್ನು ವ್ಯಕ್ತಪಡಿಸಿದರು. ಗೃಹ ಮಂತ್ರಿ ಪ್ರಿಯಾಂಕರ್ ಗೆ ಅವರು ರಾಜ್ಯದ ತುಂಬೆಲ್ಲ ಬೇಕಿಲ್ಲದ ವಿಷಯಗಳ ಬಗ್ಗೆ ಮಾತನಾಡುತ್ತಾರೆ ತನ್ನದೇ ಸಮುದಾಯದ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುತ್ತಿಲ್ಲ ಇದು ಖರ್ಗೆ ಅವರಿಗೆ ತಮ್ಮ ಸಮುದಾಯದ ಮೇಲಿರುವ ನಿಷ್ಕಾಳಜಿ ಮತ್ತು ಬೇಜವಾಬ್ದಾರಿತನವನ್ನು  ಎತ್ತಿ ತೋರಿಸುತ್ತದೆ ಎಂದರು.   ಇತ್ತೀಚೆಗೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಗಣೇಶ್ ಹಬ್ಬದ ನೆಪದಲ್ಲಿ ಸಿಂಹಾದ್ರಿ ಎಂಬ ದಲಿತ ಯುವಕನ ಕೊಲೆಯಾಗಿದೆ.

ಇದು ಮೇಲ್ನೋಟಕ್ಕೆ ಗಣೇಶ ಹಬ್ಬ ನೆಪವಾದರೂ ಇದರ ಹಿಂದೆ ಷಡ್ಯಂತರ ಅಡಗಿದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದ ಕೂಡ್ಲಿ ಈ ಘಟನೆಯನ್ನು ಸರ್ಕಾರ ಸಿಐಡಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ಘಟನೆಯಲ್ಲಿ ಸಂಪೂರ್ಣವಾಗಿ ಪೋಲಿಸ್ ಇಲಾಖೆಯ ನಿರ್ಲಕ್ಷ ಎದ್ದು ಕಾಣುತ್ತದೆ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಸಂತ್ರಸ್ತ ಕುಟುಂಬಸ್ತರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು ಮತ್ತು ಇಂಥ ಪ್ರಕರಣಗಳನ್ನು ವಿಚಾರಣೆ ಮಾಡಲು ಸರ್ಕಾರ ರಾಜ್ಯದಲ್ಲಿ ಫಾಸ್ಟ್ರಾಕ್ ಕೋರ್ಟ್‌ ಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಮರಿಯಪ್ಪ ಎಸ್, ಎರಗುಡಿ ಶಿವಶಂಕರ್, ಪ್ರತಾಪ್, ಲಕ್ಷ್ಮಣ್ ಭಂಡಾರಿ, ಕಪ್ಪಗಲ್ ಹುಲಿಯಪ್ಪ, ಈಶ್ವರಗುಡಿ ರಾಜೇಶ್ ಸೇರಿದಂತೆ ಹಲವಾರು ಇದ್ದರು.