ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ : ಶಾಸಕ ಡಿ.ಎಮ್.ಐಹೊಳೆ
Greater emphasis has been given to irrigation projects: MLA D.M. Aihole
ರಾಯಬಾಗ 12 : ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.ಸೋಮವಾರ ಜಿ.ಪಂ.ಇಲಾಖೆಯಡಿ ಮಂಜೂರಾದ ಪಟ್ಟಣದ ಪಶು ಆಸ್ಪತ್ರೆಯ ಮೊದಲ ಅಂತಸ್ತಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ದಾಸ್ತಾನು ಕೊಠಡಿ ನಿರ್ಮಾಣ ಹಾಗೂ 6 ಲಕ್ಷ ರೂ. ವೆಚ್ಚದಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಕಂಪೌಂಡ್ (ತಡೆ ಗೋಡೆ) ನಿರ್ಮಾಣ ಕಾಮಗಾರಿ ಮತ್ತು ತಾಲೂಕಿನ ಬಾವಚಿ ಗ್ರಾಮದ ಪ.ಜಾತಿ ಕಾಲೊನಿಯಲ್ಲಿ 5 ಲಕ್ಷ ರೂ.ವೆಚ್ಚದಲ್ಲಿ ಸ್ಮಶಾನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡದೇ ಇರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎಂದರು.
ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎಂ.ಬಿ ಪಾಟೀಲ, ಹಿಂ.ವ.ಕ.ಇಲಾಖೆ ಅಧಿಕಾರಿ ಕಲ್ಪನಾ ಕಾಂಬಳೆ, ಜಿ.ಪಂ.ಎಇಇ ವಿಠ್ಠಲ ಭಜಂತ್ರಿ, ಎಇ ಎಸ್.ಎಸ್. ಹೊಸಮನಿ, ಸುರೇಶ ಮಲಾಜಿ, ಅನೀಲ ಬೊಮ್ಮನವರ, ಮುಖಂಡರಾದ ಅಣ್ಣಾಸಾಹೇಬ ಖೇಮಲಾಪುರೆ, ಮಹೇಶ ಕರಮಡಿ, ಸದಾನಂದ ಹಳಿಂಗಳಿ, ದತ್ತ ಜಾಧವ, ಸುರೇಶ ಮಾಳಿ, ಜಿಯಾವುಲ್ಲಾ ಮುಲ್ಲಾ, ಸದಾಶಿವ ನಾಯಿಕ, ನಾಗಪ್ಪ ಪುಂಡಿಪಲ್ಲೆ, ಮಹಾದೇವ ನಾಯಿಕ, ಸತ್ಯಪ್ಪ ಪೂಜೇರಿ, ಅವಗೌಡ ಪಾಟೀಲ, ಅಜ್ಜಪ್ಪ ಜಲಾಲಪುರೆ, ವಸಂತ ನಾಯಿಕ, ಹನುಮಂತ ಪಾಟೀಲ, ಮಹೇಶ್ ಕುಲಗೂಡೆ, ಗೋಪಾಲ ಕೊಚೆರಿ, ಭಾರತಿ ಲೋಹಾರ, ಪ್ರೇಮ ಸಾನೆ, ರಿತೇಶ ಅವಳೆ, ರಾಕೇಶ ಅವಳೆ ಸೇರಿ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 