ನೌ ಜಮಾತ್ ಕಮಿಟಿಯಿಂದ ಅನ್ನಸಂತರೆ್ಣ ಮತ್ತು ಸನ್ಮಾನ
ಗದಗ 18 :- ರಾಜಸ್ಥಾನದ ಹೃದಯಭಾಗದಲ್ಲಿರುವ ಅಜ್ಮಿರ್ ಷರೀಫ್ ನ ಕ್ವಾಜಾ ಮೊಯಿನ್ ಉದ್ದಿನ್ ಚಿಸ್ತಿಯ ದರ್ಗಾದ ಉರುಸು ಇಂದು ಆಚರಿಸಲಾಗುತ್ತಿದ್ದು, ಆ ಪ್ರಯುಕ್ತ ಗದಗ ನಗರದಲ್ಲಿ ಸಮಸ್ತ ಮುಸ್ಲಿಂ ಭಾಂದವರಿಂದ ಜಶ್ನ ಏ ಗರೀಬ್ ನವಾಜ್ ಆಚರಣೆಯನ್ನು ನಗರದ 31 ನೇ ವಾರ್ಡಿನಲ್ಲಿರುವ ಹಳೆ ಕಚೇರಿ ಬಡಾವಣೆಯ ನೌ ಜಮಾತ್ ಕಮಿಟಿಯ ವತಿಯಿಂದ ಬ್ರಹತ್ ಅನ್ನ ಸಂತರೆ್ಣ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಯಿತು.
ಆ ಪ್ರಯುಕ್ತ ಅವಳಿ ನಗರದ 23 ನೇ ವಾರ್ಡಿನ ನಗರಸಭಾ ಸದಸ್ಯರಾದ ಬರಕತ್ ಅಲಿ ಅಬ್ದುಲ್ ವಹಾಬ್ ಮುಲ್ಲಾ ಮಹಮ್ಮದ್ ರಫೀಕ್ ನರೇಗಲ್, ಮೆಹಬೂಬ್ ಅಲಿ ಆರ್ ಅತ್ತಾರ, 20 ನೇ ವಾರ್ಡಿನ ನಗರಸಭಾ ಸದಸ್ಯರಾದ ಅಬ್ದುಲ್ ಮುನಾಫ್ ಸಾಬ್, ಮುಲ್ಲಾ, ಸಾಮಾಜಿಕ ಕಾರ್ಯಕರ್ತರಾದ ಸಯ್ಯದ್ ಖಾಲೀದ್ ಕೊಪ್ಪಳ, ಭಾಷಾಸಾಬ್ ಮಲಸಮುದ್ರ, ಅಂಜರ್ ಮೌಲಾನಾ, ರಮೇಶ್ ಮುಳಗುಂದ,ರವರನ್ನು ಗದಗ ಬೆಟಗೇರಿ ಅವಳಿ ನಗರದ ನೌ ಜಮಾತ್ ಕಮಿಟಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಸಮಸ್ತ ಮುಸ್ಲಿಂ ಭಾಂದವರಿಗೆ ಜಶ್ನ ಏ ಗರೀಬ್ ನವಾಜ್ ಪ್ರಯುಕ್ತ ಬ್ರಹತ್ ಅನ್ನ ಸಂತರೆ್ಣಯನ್ನು ಕೈಗೊಳ್ಳಲಾಯಿತು. ಈ ಸಂಧರ್ಭದಲ್ಲಿ ಸಮಸ್ತ ಮುಸ್ಲಿಂ ಸಮುದಾಯದ ಭಾಂದವರು ಹಾಗೂ ನೌ ಜಮಾತ್ ಕಮಿಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.