ಬಳ್ಳಾರಿ 07: ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡ್ರಾಳ್ ಗ್ರಾಮದ ಜಮೀನಿನೊಂದರ ಕೃಷಿ ಹೊಂಡದಲ್ಲಿ ಸಾಗರ್ ಎನ್ನುವ 25 ವರ್ಷದ ವ್ಯಕ್ತಿಯು ಸ್ನಾನ ಮಾಡಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು, ಈಜು ಬಾರದೇ ಏ.27 ರಂದು ಮೃತಪಟ್ಟಿದ್ದು, ಮೃತ ದೇಹವನ್ನು ಬಿಮ್ಸ್ ನ ಶೀಥಲೀಕೃತ ಶವಗಾರ ಕೋಣೆಯಲ್ಲಿರಿಸಲಾಗಿದೆ. ಮೃತನ ವಾರಸುದಾರರ ಬಗ್ಗೆ ತಿಳಿದಿರುವುದಿಲ್ಲ. ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಚಹರೆ ಗುರುತು: ಎತ್ತರ 5.4 ಅಡಿ, ದುಂಡು ಮುಖ, ಸಾಧಾರಣ ತೆಳ್ಳನೇಯ ಮೈಕಟ್ಟು, ಗೋಧಿ ಮೈ ಬಣ್ಣ ಹೊಂದಿದ್ದು, ಬಲ ಕಣ್ಣು ಮೆಳ್ಳಿಗಣ್ಣು ಇದ್ದು, ಬಲಗೈ ಭುಜದ ಬಳಿ ಒಂದು ಚಿಕ್ಕ ಕಪ್ಪು ಮಚ್ಚೆ ಇರುತ್ತದೆ. ಬಲಗೈ ಪಾದದ ಮೇಲೆ ಹಳೆ ಗಾಯದ ಗುರುತು ಇರುತ್ತದೆ.
ಬಲಗೈ ಮೇಲೆ ಹಳದಿ ಬಣ್ಣದ ಸಂಗೋಳ್ಳಿ ರಾಯಣ್ಣ ಹೆಸರು ಇರುವ ರಬ್ಬರ್ ಬ್ಯಾಂಡ್, ಸ್ಟೀಲ್ ಕಡುಗ ಧರಿಸಿರುತ್ತಾನೆ. ಸಿಮೆಂಟ್ ಬಣ್ಣದ ಪ್ಯಾಂಟ್ ಮತ್ತು ಕೆಂಪು ಬಣ್ಣದ ಒಳಉಡುಪು ಧರಿಸಿರುತ್ತಾನೆ. ವ್ಯಕ್ತಿಯು ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾನೆ.
ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ದೂ.08396-220333, ಮೊ.9480803053, ಸಿಪಿಐ ದೂ.08396-220003, ಮೊ.9480803032, ಬಳ್ಳಾರಿ ಗ್ರಾಮೀಣ ಉಪವಿಭಾಗ ಡಿಎಸ್‌ಪಿ ದೂ.08392-276000, ಮೊ.9480803021 ಅಥವಾ ಬಳ್ಳಾರಿ ಎಸ್‌ಪಿ ಕಚೇರಿ ದೂ.08392-258400 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.