ಗದಗ 19: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ವಷರ್ಾಚರಣೆ ಅಂಗವಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಶೇಷವಾಗಿ ವಿನ್ಯಾಸಗೊಳಿಸಿದ ಗಾಂಧಿ-150 ಅಭಿಯಾನ ಸ್ತಬ್ಧಚಿತ್ರದ 2ನೇ ಹಂತದ ಸಂಚಾರ ಗದಗ ಜಿಲ್ಲೆಯ ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಗಳಲ್ಲಿ ಮಂಗಳವಾರ ದಿ.18ರಂದು ನಡೆಯಿತು. ಮೊದಲ ಹಂತದಲ್ಲಿ ಜಿಲ್ಲೆಯ ಗದಗ, ಗಜೇಂದ್ರಗಡ, ರೋಣ ಹಾಗೂ ನರಗುಂದ ತಾಲೂಕುಗಳಲ್ಲಿ ಅದು ಸಂಚರಿಸಿತ್ತು.
ಮುಂಡರಗಿಯಲ್ಲಿ ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟರ, ತಾಲೂಕಾ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ, ಶಿರಹಟ್ಟಿಯಲ್ಲಿ ತಹಶೀಲ್ದಾರ ಎ.ಡಿ.ಅಮರಾವದಗಿ, ಪಟ್ಟಣ ಪಂಚಾಯತದ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ, ಸದಸ್ಯರುಗಳಾದ ಪಕ್ಕೀರೇಶ ರಟ್ಟಿಹಳ್ಳಿ, ಪಿ.ವೈ.ಪರಬ, ಪಿ.ಎಸ್.ಐ ಬಿ,ವೈ.ಖಜಗಲ್, ಲಕ್ಷ್ಮೇಶ್ವರದಲ್ಲಿ ತಹಶೀಲ್ದಾರ ಕೆ.ಬಿ. ಕೋರಿಶೆಟ್ಟರ ಅವರುಗಳು ಸ್ತಬ್ಧಚಿತ್ರದ ಮುಂಭಾಗದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಮಾಲರ್ಾಪಣೆ ಹಾಗೂ ಪುಷ್ಪಾರ್ಚಣೆ ಮಾಡುವ ಮೂಲಕ ಗೌರವ ಸಲ್ಲಿಸಿ ಸ್ತಬ್ಧಚಿತ್ರವನ್ನು ಸ್ವಾಗತಿಸಿದರು.
ಆಯಾ ಪಟ್ಟಣಗಳ ಪ್ರಮುಖ ಬೀದಿಯಲ್ಲಿ ಸಂಚರಿಸಿದ ಸ್ತಬ್ದಚಿತ್ರದಲ್ಲಿ ಗಾಂಧೀಜಿ ಅವರ ಪ್ರತಿಮೆ, ಚರಕ ಹಾಗೂ 18 ಮಂದಿ ಹೋರಾಟಗಾರರೊಂದಿಗೆ ಗಾಂಧೀಜಿ ಅವರ ಮುಂದಾಳತ್ವ, ಬಾಲಕ ಗಾಂಧಿ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆ ಮಗುವಾಗಿ ಗಾಂಧಿ, ಬರವಣಿಗೆ ನಿರತ ಗಾಂಧಿ, ಗಾಂಧೀಜಿ ವಿಚಾರಧಾರೆಗಳು ಮುಂತಾದ ವಿಷಯಗಳನ್ನು ಚಿತ್ರಿಸಲಾಗಿದೆ