ಕೊಪ್ಪಳ 02: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಈ ಕಾಯ್ದೆಯನ್ನು ವಾಪಸ್ ಪಡೆಯಲು ಆಗ್ರಹಿಸಿ ಅಖಿಲ ಭಾರತ ಮುಸ್ಲಿಮ್ ವಯಕ್ತಿಕ ಕಾನೂನು ಮಂಡಳಿ ವತಿಯಿಂದ ಕೊಪ್ಪಳ ನಗರದಲ್ಲಿ ಮೇ. 3 ರಂದು ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ,
ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮಾಜ ಬಾಂಧವರು ಮತ್ತು ಸಮಾನ ಮನಸ್ಕರು ಸೇರಿ ಪ್ರತಿಭಟನಾ ಮೆರವಣಿಗೆ ಯಶಸ್ವಿಗೊಳಿಸಬೇಕೆಂದು ಸಮಾಜದ ಮುಖಂಡ ಹಾಗೂ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಕರೆ ನೀಡಿದ್ದಾರೆ ,
ಈ ಕುರಿತು ಹೇಳಿಕೆ ನೀಡಿದ ಅವರು ಸಂವಿಧಾನದ ಮೂಲಭೂತ ಅಂಶಗಳ ವಿರುದ್ಧವಾಗಿ ಮುಸ್ಲಿಮರ ನ್ಯಾಯಯುತವಾದ ಆಸ್ತಿಗಳಾದ ಮಸ್ಟಿದ್, ದರ್ಗಾ, ಈದ್ಗಾ, ಖಬ್ರಸ್ಥಾನಗಳಿಗೆ ದಕ್ಕೆ ಮತ್ತು ಮುಸ್ಲಿಂರ ಭಾವನೆಗಳಿಗೆ ಘಾಸಿಯನ್ನುಂಟು ಮಾಡುವ ವಕ್ಪ್ ತಿದ್ದುಪಡಿ ಕಾಯಿದೆ 2025 ಯನ್ನು ಜಾರಿ ಮಾಡಿರವ ಕ್ರಮವು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಕಸಿದುಕೊಳ್ಳುವದಾಗಿದೆ ಇದನ್ನು ನಾವು ಬಲವಾಗಿ ಖಂಡಿಸಿ, ಇದರ ವಿರುದ್ಧ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ವಿವರಿಸಿದರುವಕ್ಪ್ ಆಸ್ತಿ ಅಂದರೆ ದಾನಿಗಳು ಮುಸ್ಲಿಮ್ ಸಮುದಾಯದ ಸಾಮೂಹಿಕ ಕೆಲಸಗಳಿಗೆ ದಾನ ಮಾಡಿದ ಆಸ್ತಿಗಳು ಸದರಿ ಆಸ್ತಿಗಳನ್ನು ಯಾರು ದುರುಪಯೋಗ ಮಾಡಬಾರದು ಎಂದು ಸರ್ಕಾರದ ಅಡಿಯಲ್ಲಿ ಬರುವ ವಕ್ಪ್ ಎಂಬ ಸರ್ಕಾರಿ ಮಂಡಳಿಯಲ್ಲಿ ನೊಂದಣಿ ಮಾಡಲಾಗುತ್ತದೆ ಮತ್ತು ಅದರ ನಿರ್ವಹಣೆಯನ್ನು ಮುಸ್ಲಿಮರೆ ಇಸ್ಲಾಂ ಧರ್ಮದ ಆಚರಣೆಗಳ ಅನುಗುಣವಾಗಿ ಮಾಡುತ್ತಾರೆ ಇದು ಸಂವಿಧಾನವು ಮುಸ್ಲಿಮರಿಗೆ ನೀಡಿರುವ ಮೂಲಭೂತ ಹಕ್ಕು ಸಂವಿಧಾನದ ಆರ್ಟಿಕಲ್ 26 ರ ಪ್ರಕಾರ ಭಾರತದ ಯಾವುದೇ ಧರ್ಮೀಯರು ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಹಾಗೂ ದತ್ತಿದಾನಗನ್ನು ಮಾಡಲು ತಮ್ಮದೇ ಆದ ಸಂಸ್ಥೆಗಳನ್ನು ರಚಿಸಿಕೊಂಡು ನಿರ್ವಹಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಕಾರಣ ಕೇಂದ್ರದ ಕೋಮುವಾದಿ ಬಿಜೆಪಿ ಸರ್ಕಾರದ ಧೋರಣೆ ಖಂಡಿಸಿ ಕೊಪ್ಪಳದಲ್ಲಿ ಜ್ವರದಲ್ಲಿರುವ ಬೃಹತ್ ಪ್ರತಿಭಟನೆ ಮೆರವಣಿಗೆಯಲ್ಲಿ ಮುಸ್ಲಿಂ ಸಮಾಜ ಬಾಂಧವರು ಸೇರಿದಂತೆ ಸಮಾಜದ ವಿವಿಧಸಂಘಟನೆಗಳ ಸೇರಿದಂತೆ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಮಾಜದ ಮುಖಂಡ ಹಾಗೂ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಪ್ರಕಟಣೆ ಮೂಲಕ ಕರೆಯನ್ನು ನೀಡಿದ್ದಾರೆ.