ದೈನಂದಿನ ಬದುಕಿಗೆ ಆಟಗಳಿಂದ ಮನಸ್ಸಿಗೆ ನೆಮ್ಮದಿ
Games for everyday life bring peace of mind
ದೈನಂದಿನ ಬದುಕಿಗೆ ಆಟಗಳಿಂದ ಮನಸ್ಸಿಗೆ ನೆಮ್ಮದಿ
ಹೂವಿನ ಹಡಗಲಿ 10: ವೃತ್ತಿಯ ದೈನಂದಿನ ಜೀವನದಲ್ಲಿ ಉಲ್ಲಾಸ ಉತ್ಸಾಹ ಮೂಡಿಸಲು ಆಟಗಳು ಕಾರಣ ಎಂದು ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಎಚ್ ಎಂ ವೀರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ತುಂಗಭದ್ರಾ ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಭಾನುವಾರ ವೈದ್ಯಕೀಯ ಸಂಘದ ವತಿಯಿಂದ ಆಯೋಜಿಸಿದ್ದ ವಿವಿಧ ಆಟೋಟಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಡಾ ಅಟವಾಳಗಿ ಪ್ರಕಾಶ್ ವೈದ್ಯಕೀಯ ಸಂಘದ ವತಿಯಿಂದ ವರ್ಷಪೂರ್ತಿ ವಿನೂತನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಸಂಘಟಿಸಲಾಗುವುದು ಎಂದು ಹೇಳಿದರು.ಚಿತ್ರಕಲಾ ಶಿಕ್ಷಕರಾದ ಎಸ್ ದ್ವಾರಕೀಶ್ ರೆಡ್ಡಿ ಉಪನ್ಯಾಸಕ ಶಂಕರ್ ಬೆಟಗೇರಿ, ಡಾ ರಾಕೇಶಯ್ಯ ರಾಮಸ್ವಾಮಿ,ಡಾ ಆನಂದ್, ಡಾ ಕೆ ವೀರೇಶ್,ಡಾ ಸೋಮಶೇಖರ್, ಬೆಲ್ಲದ ದರ್ಶನ್, ಕಾರ್ತಿಕ್ ಇತರರು ಹಾಜರಿದ್ದರು.ಮುಖ್ಯ ಗುರು ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಡಾ ಜೆ ಡಿ ಉಮೇಶ್ ನಿರ್ವಹಿಸಿದರು.ವೈದ್ಯಕೀಯ ಸಂಘದ ಪದಾಧಿಕಾರಿಗಳು ಕ್ರಿಕೆಟ್ ಥ್ರೋಬಾಲ್ ವಾಲಿಬಾಲ್ ವಿವಿಧ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಾರ್ಥಕಗೊಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 