ನೀಲಕಂಠ ಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Free health checkup camp in Neelkanth Math premises

ನೀಲಕಂಠ ಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ 

ಬೆಟಗೇರಿ : ಪರಮಾತ್ಮ ನಮಗೆ ಶರೀರವನ್ನು ಕೊಟ್ಟಿದ್ದಾನೆ, ಮನುಷ್ಯನ ಜೀವನದಲ್ಲಿ ಆರೋಗ್ಯವು ದೊಡ್ಡ ಸಂಪತ್ತಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಮುಂದಾಗಬೇಕು, ಇಂದಿನ ಒತ್ತಡ ಜೀವನದಲ್ಲಿ ನಿತ್ಯ ಕಾರ್ಯ ನಿರ್ವಹಿಸುತ್ತಿದ್ದೇವೆ ಆದರಿಂದ ಅನೇಕ ರೀತಿಯ ಮಾನಸಿಕ ಕಾಯಿಲೆಗಳು ಹಾಗೂ ಆರೋಗ್ಯದಿಂದಲೂ ಅನೇಕ ರೀತಿಯ ಕಾಯಿಲೆಗಳು ಮನುಷ್ಯನ್ನು ಕಾಡುತ್ತಿವೆ, ದೇಶದ ಸರ್ವಾಂಗೀಣ ಅಭಿವೃದ್ದಿಗೆ ಆರೋಗ್ಯ ಅತ್ಯಂತ ಅವಶ್ಯವಾಗಿದೆ, ಪ್ರಸ್ತುತ ದಿನಗಳಲ್ಲಿ ಬಹಳ ಬಡ ಜನರು ಆಸ್ಪತ್ರಗಳಿಗೆ ತೆರಳಿ ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಈ ದಿನ ಶ್ರೀ ಮಠದಲ್ಲಿ ಆರೋಗ್ಯದ ಕುರಿತು ಜಾಗೃತಿ ನೀಡುವದರ ಜೊತೆಗೆ ಎಲ್ಲ ಜನರಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ ಮಾಡಿ ಮತ್ತು ಅವರಿಗೆ ಅವಶ್ಯವಿರುವ ಓಷದಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಯಿತು ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲವಾಗುವಂತಹ ಇತರೆ ಕಾರ್ಯಕ್ರಮಗಳು ನಡೆಯಲಿ ಎಂದು ಪಾವನ ಸಾನಿಧ್ಯ ಕರುಣಿಸಿದ ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಆಶಿರ್ವದಿಸಿದರು. ಗದಗ - ಬೆಟಗೇರಿ ನಗರದ ಹೃದಯಭಾಗದಲ್ಲಿರುವ ಕುರಹಟ್ಟಿ ಪೇಟೆಯಲ್ಲಿರುವ ನೀಲಕಂಠ ಮಠದ ಆವರಣದಲ್ಲಿ  ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳವರ ಪಟ್ಟಾಭಿಷೇಕದ 27 ನೇ ವರ್ಷದ ವರ್ದಂತಿ ಮಹೋತ್ಸವ ಅಂಗವಾಗಿ ಕುರುಹಿನಶೆಟ್ಟಿ ಸಮಾಜದ 27ನೇ ವರ್ಷದ ಉತ್ಸವ ಸಮಿತಿ ಹಾಗೂ ಕುರುಹಿನಶೆಟ್ಟಿ ಸಮಾಜದ ಮಹಿಳಾ ಮಂಡಳ ಬೆಟಗೇರಿ - ಗದಗ ಇವರು ಅಯೋಜಿಸಿದ್ದು ಗದಗ ಸೆಂಟ್ರಲ್ ಕ್ಲಬ್, ಗದಗ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ಗದಗ ಜಿಲ್ಲಾ ಆರೋಗ್ಯ ಇಲಾಖೆ, ಕ್ಷಯರೋಗ ನಿರ್ಮೂಲನ ಕೇಂದ್ರ ಹಾಗೂ ಗದಗ ಜಿಲ್ಲಾ ಓಷಧ ವ್ಯಾಪಾರಸ್ಥರ ಸಂಘ ಇವರ ಸಹಯೋಗದೊಂದಿಗೆ ಜಿಲ್ಲಾ ವೈದ್ಯರುಗಳ ಹಾಗೂ ಅನುಭವಿ ಸಿಬ್ಬಂದಿಗಳ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು. ಡಾಽಽ ಶ್ರೀಮತಿ ಅರುಂಧತಿ ಕುಲಕರ್ಣಿ ಮಾತನಾಡಿ ಆರೋಗ್ಯದ ನಿಶ್ಕಾಳಜಿ ಮಾಡಬಾರದು, ಪ್ರತಿಯೊಬ್ಬರೂ ವರ್ಷಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು, ಒತ್ತಡ ಮುಕ್ತ ಜೀವನ ರೂಡಿಸಿಕೊಳ್ಳಬೇಕು, ಸಾತ್ವಿಕ ಆಹಾರ ಸೇವಿಸಬೇಕು, ಸಾತ್ವಿಕ ಚಿಂತನೆಗಳನ್ನು ಮಾಡಬೇಕೆಂದು ತಿಳಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಮೇಲ್ವಿಚಾರಕರಾದ ಗಣೇಶ ಅವರು ಮಾತನಾಡಿ ಕ್ಷಯ ರೋಗದ ಕುರಿತು ಸಾಕಷ್ಟು ಮಾಹಿತಿಯನ್ನು ತಿಳಿಸಿದರು. ಜಿಲ್ಲಾ ಓಷಧ ವ್ಯಾಪಾರಸ್ಥರ ಸಂಘದವರಾದ ದಾನಪ್ಪನವರ ಮಾತನಾಡಿ ಇಂದು ನಡೆಯುತ್ತಿರುವ ಉಚಿತ ಆರೋಗ್ಯ ಶಿಬಿರದಲ್ಲಿ ಉಚಿತವಾಗಿ ಓಷದಗಳನ್ನು ನೀಡುತ್ತಿರುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು. ಡಾಽಽ ಮಧುಮತಿ, ಡಾಽಽಪ್ರವೀಣ (ಆರ್ಥೊ), ಡಾಽಽ ಗುರುಪ್ರಸಾದ (ಡೈನಾಕಾಲೊಜಿಸ್ಟ), ಡಾಽಽ ರವಿ (ಪಿಜಿಸಿಯನ್) ಡಾಽಽ ಅರುಂಧತಿ ಕುಲಕರ್ಣಿ ಮಾಂತೇಶ ರಮಣಿ ( ಓಷಧ ವ್ಯಾಪಾರಸ್ಥರು ರಾಜ್ಯ ಜಿಲ್ಲಾ ಪ್ರತಿನಿಧಿ) ವರಿಷ್ಠ ಮಂಡಳಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಐಲಿ, ಕುರುಹಿನಶೆಟ್ಟಿ ಸಮಾಜದ 27ನೇ ವರ್ಷದ ಉತ್ಸವ ಸಮಿತಿ ಅಧ್ಯಕ್ಷರಾದ ಶಂಕರ ಎನ್, ಕಾಕಿ, ಕುರುಹಿನಶೆಟ್ಟಿ ಸಮಾಜದ ಮಹಿಳಾ ಮಂಡಳ ಬೆಟಗೇರಿ - ಗದಗ  ಅಧ್ಯಕ್ಷರಾದ ಶಶಿಕಲಾ ಎನ್‌. ಶ್ಯಾವಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಹೊನ್ನಾದೇವಿ ಕುದರಿ ಪ್ರಾರ್ಥಿಸಿದರು, ಪ್ರಸ್ತಾವಿಕ ನುಡಿಯನ್ನು ಶಂಕರ ನಾಗಪ್ಪ ಕಾಕಿ, ಸ್ವಾಗತ ಹಾಗೂ ನಿರೂಪಣೆಯನ್ನು ಶೋಭಾ ಮಾರುತಿ ಜುಟ್ಲಾ, ವಂದನಾರೆ​‍್ಣಯನ್ನು ಪೂಜಾ ನೀಲಕಂಠಪ್ಪ ಗದಗಿನ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಎಲ್ಲ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು.