8ಕ್ಕೆ ಹೂವಿನಹಡಗಲಿ ರಾಜಾಬಾಗ್ ಸವಾರ್ ಉರುಸ್
ಲೋಕದರ್ಶನ ವರದಿ
ಹೂವಿನಹಡಗಲಿ 6: ಪಟ್ಟಣದಲ್ಲಿ ರಾಜಾಬಾಗ್ ಸವಾರ್ (ಯಮನೂರುಸ್ವಾಮಿ) ಉರುಸ್ ಮಾರ್ಚ್ 8ರಂದು ಜರುಗಲಿದೆ. 7ರಂದು ರಾತ್ರಿ ದರ್ಗಾದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ, ಗಂಧ ಮಹೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಗುವುದು. 8ರಂದು ಬೆಳಗಿನ ಜಾವ ಉರುಸ್ ಆಚರಣೆ ಪ್ರಾರಂಭ-ವಾಗಲಿದೆ. ಬಸವಕಲ್ಯಾಣದ ಹಜರತ್ ಖಾಜಾ ಉಲ್ ಹಸನ್ ಜಹಗೀರದಾರ್, ಬೆಳಗಟ್ಟಿಯ ಸೈಯ್ಯದ್ ಶಾ ಅನ್ವರ್ ಬಾಷಾ, ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ರಾಮಸ್ವಾಮಿ ರಾಕೇಶಯ್ಯ, ಚೌಕಿಮಠದ ಗಾಡಿತಾತಾ, ಶಾಸಕ ಕೃಷ್ಣನಾಯ್ಕ, ಸಂಸದ ಇ. ತುಕಾರಾಂ, ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹಾಗೂ ಗಣ್ಯರು ಭಾಗವಹಿಸುವರು.ಉರುಸ್ ಪ್ರಯುಕ್ತ 8ರಂದು ರಾತ್ರಿ ಪ್ರಕಾಶ್ ಜೈನ್ ತಂಡದಿಂದ ಭಾವಗೀತೆ ಹಾಗೂ ಸವಾಲ್ ಪದಗಳ ಕಾರ್ಯಕ್ರಮ, 9ರಂದು ರಾತ್ರಿ ಚಂದನ ಕಲಾತಂಡದಿಂದ ರಸಮಂಜರಿ, ಖವ್ವಾಲಿ ಕಾರ್ಯಕ್ರಮ, 10ರಂದು ರಾತ್ರಿ ರಸಮಂಜರಿ ಕಾರ್ಯಕ್ರಮ ಹಮ್ಮಿ-ಕೊಳ್ಳಲಾಗಿದೆ. 9 ಮತ್ತು 10ರಂದು ಬೆಳಿಗ್ಗೆ ಟಗರಿನ ಕಾಳಗ ಸಂಜೆ ತಾಲ್ಲೂಕು ಕ್ರೀಡಾಂಗಣದಲ್ಲಿ ಜಂಗೀಕುಸ್ತಿ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿಗಳು ಜರುಗಲಿವೆ ಎಂದು ಉರುಸು ಕಮಿಟಿ ಗೌರವ ಅಧ್ಯಕ್ಷ ಕೆ. ಗೌಸ್ ಮೊಹಿದ್ದೀನ್ ಅಧ್ಯಕ್ಷ ಎಸ್.ಶಫಿವುಲ್ಲಾ ತಿಳಿಸಿದ್ದಾರೆ.ಉರುಸು ಕಮಿಟಿ ಪದಾಧಿಕಾರಿಗಳಾದ ಮೂಲಿಮನಿ ದಾದಾ, ಕಲೆಗಾರ ನಜೀರ್ ಸಾಬ್, ಕೊಟ್ಟೂರು ಗೌಸ್ ಸಾಬ್, ಇಬ್ರಾಹಿಂ ಕಲೀಲ್, ಹುಸೆನ್ ಸಾಬ್, ವಾರದ ದಾದಾಪೀರ್, ಎಂ. ಮರ್ದಾನ್, ಖಾಜಾ, ಮಾಬುಸಾಬ್ ಇದ್ದರು.