ಫೆ. 1ರಿಂದ ಹರೇ ಕೃಷ್ಣ ರಥ ಯಾತ್ರೆ
Feb. Hare Krishna Rath Yatra from 1
ಫೆ. 1ರಿಂದ ಹರೇ ಕೃಷ್ಣ ರಥ ಯಾತ್ರೆ
ಬೆಳಗಾವಿ 29: ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಂಘ ಬೆಳಗಾವಿ ವತಿಯಿಂದ 27ನೇ ವಾರ್ಷಿಕ ಹರೇ ಕೃಷ್ಣ ರಥ ಯಾತ್ರೆ ಮಹೋತ್ಸವವನ್ನು ಫೆ. 1 ಮತ್ತು 2ರಂದು ಆಚರಿಸಲಾಗುತ್ತಿದೆ. ಎಂದು ಭಕ್ತಿರಸಾಮೃತ ಸ್ವಾಮಿಜಿ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ದಿ. 1ರಂದು ರಥಯಾತ್ರೆ ಮೆರವಣಿಗೆಯು ಧರ್ಮವೀರ ಸಂಭಾಜಿ ಚೌಕನಿಂದ ಮಧ್ಯಾಹ್ನ 1ಘಂಟೆಗೆ ಪ್ರಾರಂಭವಾಗಿ ಇಸ್ಕಾನ್ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ಕೊನೆಗೊಳ್ಳುತ್ತದೆ. ಸಾಯಂಕಾಲ 6.30ಕ್ಕೆ ರಾಧಾ ಕೃಷ್ಣ ಮತ್ತು ಗೌರ್ ನಿತಾಯಿ ಅವರ ಆರತಿ, ಸಂಜೆ 6.30ರಿಂದ 7ರವರೆಗೆ ಕೀರ್ತನೆ, 7ರಿಂದ 9.30ಕ್ಕೆ ಇಸ್ಕಾನ್ ವರಿಷ್ಠ ಭಕ್ತರಿಂದ ಪ್ರವಚನ ಮತ್ತು ಆಧ್ಯಾತ್ಮಿಕ ನಾಟ್ಯಲೀಲಾ ಕಾರ್ಯಕ್ರಮ ಜರುಗಲಿವೆ. ನಂತರ ಮಹಾಪ್ರಸಾದ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಕ್ತಿರಸಾಮೃತ ಸ್ವಾಮಿಜಿ ಅವರೊಂದಿಗೆ ಕಮಿಟಿ ಅಧ್ಯಕ್ಷ ಬಾಲಕೃಷ್ಣ ಭಟ್ಟಡ ಮತ್ತು ಎಚ್.ಡಿ.ಕಾಟವಾ ಉಪಸ್ಥಿತರಿದ್ದರು.
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ 