ಶೇಂಗಾ ಬೆಳೆಗೆ ರೋಗ ಆತಂಕದಲ್ಲಿ ರೈತರು

ಶೇಂಗಾ ಬೆಳೆಗೆ ರೋಗ ಆತಂಕದಲ್ಲಿ ರೈತರು  Farmers worried about disease in groundnut crop

ಲಕ್ಷ್ಮೇಶ್ವರ  21: ತಾಲೂಕಿನಲ್ಲಿ ಶೇಂಗಾ ಬೆಳೆಗೆ ರೋಗ ಆವರಿಸಿದ್ದು ರೈತರು ಆತಂಕ ಪಡುವಂತಾಗಿದೆ ಈಗಾಗಲೇ ರಾಜ್ಯದಲ್ಲಿ ಬರಗಾಲ ಚಾಯ್ ಆವರಿಸಿದ್ದು ಬರುವ ಅಲ್ಪ ಸ್ವಲ್ಪ ಬೆಳೆಯಲ್ಲಿ ಸಮಾಧಾನ ಪಟ್ಟುಕೊಳ್ಳುತ್ತಿದ್ದ ರೈತರಿಗೆ ಈಗ ಮತ್ತೊಂದು ಆತಂಕ ಎದುರಾಗಿದೆ ಪ್ರಥಮದಲ್ಲಿ ಉತ್ತಮವಾಗಿ ಬೆಳೆದ ಶೇಂಗಾ ಬೆಳೆಗೆ ಹುಳ್ಳೆ ಪುಚ್ಚಿ ರೋಗಸೇರಿದಂತೆ ಹಲವಾರು ಬಗೆಯ ರೋಗ ಕಾಣಿಸಿಕೊಂಡಿದ್ದು ರೈತರನ್ನು ಮತ್ತಿಷ್ಟು ಆತಂಕಕ್ಕೆ ದುಡಿದೆ ಅದರಂತೆ ತಾಲೂಕಿನ ಗೊಜನೂರು ಗ್ರಾಮದ ರೈತ ಚನ್ನಪ್ಪ ಷಣ್ಮುಖಿ ಎಂಬುವವರು ತಮ್ಮ ಜಮೀನಿನಲ್ಲಿ ಬೆಳೆದ ಶೇಂಗಾ ಬೆಳೆಗೆ ರೋಗ ಕಾಣಿಸಿಕೊಂಡಿದ್ದು ಅವರು ಸಹ ಆತಂಕ ಪಡುವಂತಾಗಿದೆ ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮತ್ತು ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು ಶೇಂಗಾ ಬೆಳೆಗೆ ರೋಗ ಕಾಣಿಸಿಕೊಂಡ ರೈತರ ಜಮೀನುಗಳಿಗೆ ತೆರಳಿ ರೋಗ ಹತೋಟಿಯ ಬಗ್ಗೆ ರೈತರಿಗೆ ಸಮರ​‍್ಕವಾಗಿ ಮಾಹಿತಿಯನ್ನು ಒದಗಿಸುವಂತಹ ಕೆಲಸ ಮಾಡಬೇಕು ಇದರಿಂದ ರೈತರಿಗೆ ಅನುಕೂಲವಾಗುತ್ತದೆಅದಕ್ಕಾಗಿ ಕೃಷಿ ಇಲಾಖೆ ಅಧಿಕಾರಿಗಳು ಆದಷ್ಟು ಬೇಗನೆ ಎಲ್ಲ ರೈತರ ಜಮೀನುಗಳಿಗೆ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ