ಕಾಲುವೆ ದುರಸ್ಥಿ ಕ್ರಮ ಕೈಗೊಳ್ಳಲು ರೈತರು ಆಗ್ರಹ

ಕಾಲುವೆ ದುರಸ್ಥಿ ಕ್ರಮ ಕೈಗೊಳ್ಳಲು ರೈತರು ಆಗ್ರಹ Farmers demand action to repair canals

ಕಾಲುವೆ ದುರಸ್ಥಿ ಕ್ರಮ ಕೈಗೊಳ್ಳಲು ರೈತರು ಆಗ್ರಹ 

ಘಟಪ್ರಭಾ 02: ಘಟಪ್ರಭಾ ನೀರಾವರಿ ನಿಗಮ ವ್ಯಾಪ್ತಿಯಲ್ಲಿ ಬರುವ ಗಿ ಎಲ್ ಬಿ ಸಿ  ಕಾಲುವೆಯ ಬಡಿಗವಾಡ ಬ್ರೀಜ್ಡ ಹತ್ತಿರದಲ್ಲೇ ಸಾಗುವ ಮಲ್ಲಾಪೂರ ಮತ್ತು ಬಡಿಗವಾಡ ಹೋಗುವ ಬ್ರ್ಯಂಚ ಉಪಕಾಲುವೆ ಸಂಪೂರ್ಣ ಒಡೆಯುವ ಸ್ಥಿತಿ ನಿರ್ಮಾಣವಾಗಿದೆ, ಸಂಪೂರ್ಣ ನೀರು ಹಾಳಾಗಿ ಹೊಲಗಳಿಗೆ ನುಗ್ಗಿ ಭೂಮಿ ನಾಶವಾಗುತ್ತಿವೆ ,ದಯವಿಟ್ಟು ಸಂಬಂಧಪಟ್ಟ ಕಾರ್ಯನಿರ್ವಾಹಕ ಅಭಿಯಂತರು, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ  ಕ್ರಮಕೈಗೊಳ್ಳಬೇಕೆಂದು ಈ ಭಾಗದ ರೈತರು ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.  

ಶೀಘ್ರದಲ್ಲಿ ದುರಸ್ತಿ ಕಾರ್ಯ ಕೈಗೊಂಡು ನೀರು ಪೋಲಾಗುವದನ್ನು ತಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರೈತರು ತಿಳಿಸಿದ್ದಾರೆ.