ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಬೆಳೆಸಿ ರೈತರಿಗೆ ಜಿಲ್ಲಾಧಿಕಾರಿ ಕರೆ
ಹಾವೇರಿ18: ಬುದ್ಧಿವಂತಿಕೆ, ಸಕಾರಾತ್ಮಕ ಚಿಂತನೆಯೊಂದಿಗೆ ಕೃಷಿಯನ್ನು ಅತ್ಯಂತ ಲಾಭದಾಯಕ ಉದ್ಯೋಗವಾಗಿ ಕೈಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.
ಶಿಗ್ಗಾಂವ ತಾಲೂಕು ಹುಲಗೂರಿನ ರೈತ ಚೆನ್ನಪ್ಪ ಶೆಟ್ಟರ ಅವರ ಡಿಜೆ ತೆಂಗಿನ ತಳಿ ಬೆಳೆ ತೋಟದಲ್ಲಿ ರೈತ ಕ್ಷೇತ್ರ ಅಧ್ಯಯನ ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಈ ಸಂದರ್ಭದಲ್ಲಿ ರೈತರನ್ನುದ್ದೇಶಿಸಿ ಅವರು ಕೃಷಿಯಲ್ಲಿ ಆಧುನಿಕತೆ, ಬಹು ಬೆಳೆ ಪದ್ಧತಿ ಹಾಗೂ ಸಂಘಟಿತ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಗತ್ತಿನಲ್ಲಿ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ ದೇಶ ಭಾರತ ದೇಶವಾಗಿದೆ. ರೈತರೇ ನಮ್ಮ ದೇಶದ ಭವಿಷ್ಯದ ನಿಜವಾದ ವಾರಸುದಾರರು. ಕೃಷಿಯಲ್ಲಿ ಬುದ್ಧಿವಂತಿಕೆ, ಶ್ರಮವಹಿಸಿದರೆ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಬೆಳೆಸುವ ಸಾಮಥ್ರ್ಯ ನಮ್ಮ ದೇಶದ ರೈತರಿಗೆ ಇದೆ ಎಂದು ಅವರು ಹೇಳಿದರು.
ಕೃಷಿಯ ಬಗ್ಗೆ ನಕಾರಾತ್ಮಕವಾದ ಚಿಂತನೆಯನ್ನು ದೂರಮಾಡಿ, ಆಧುನಿಕ ತಂತ್ರಜ್ಞಾನ, ನಬಾಡರ್್ನಂತಹ ಸಂಸ್ಥೆಗಳ ನೆರವು, ನರೇಗಾ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆಯ ಯೋಜನೆಗಳ ಮಾಹಿತಿಯನ್ನು ಪಡೆಯಿರಿ. ಸಂಘಟಿತವಾದ ಕೃಷಿಯ ಮೂಲಕ ಅತ್ಯಂತ ಲಾಭದಾಯಕ ಉದ್ಯೋಗವಾಗಿ ಕೃಷಿಯನ್ನು ಬೆಳೆಸಿ ಎಂದು ರೈತರಿಗೆ ಸಲಹೆ ನೀಡಿದರು.
ಗಮನ ಸೆಳೆದ ತೆಂಗಿನ ತೋಟ: ಡಿಜೆ ಸಂಪೂರ್ಣ ಎಂಬ ನೂತನ ತೆಂಗಿನ ತಳಿಯ ಫಸಲು ಎಲ್ಲರ ಗಮನ ಸೆಳೆಯಿತು. ಗಿಡ ನೆಟ್ಟ ಎರಡು ವರ್ಷದಲ್ಲೇ ಫಲ ನೀಡುವ ಡಿಜೆ ತಳಿಯ ತೆಂಗಿನ ಮರ ಐದನೂರಕ್ಕೂ ಅಧಿಕ ತೆಂಗಿನ ಫಸಲವನ್ನು ನೀಡುತ್ತದೆ. ಪ್ರತಿ ತೆಂಗಿನ ಕಾಯಿಯಲ್ಲಿ ಮುಕ್ಕಾಲು ರಿಂದ ಒಂದು ಲೀಟರ್ ವರೆಗೆ ಎಳೆ ನೀರು ಇರುವ ಈ ಅಪರೂಪದ ತೆಂಗಿನ ತಳಿಯನ್ನು ಹುಲಗೂರಿನ ಚೆನ್ನಪ್ಪ ಶೆಟ್ಟರ ಬೆಳೆಸಿದ್ದಾರೆ. ಈ ತಳಿ ಅತ್ಯಂತ ಲಾಭದಾಯಕವಾಗಿದ್ದು, ಮಿಶ್ರ ಬೆಳೆಯಾಗಿ ಅತ್ಯಂತ ಲಾಭ ತರುವ ಬೆಳೆಯಾಗಿ ಬೆಳೆಯಬಹುದು ಎಂದು ತೋಟಗಾರಿಕೆ ಇಲಾಖೆಯ ತಜ್ಞರು ಪ್ರಾತ್ಯಕ್ಷೀತೆ ಮೂಲಕ ರೈತರ ಗಮನ ಸೆಳೆದರು.
ಈ ತಳಿಗೆ ಮಾರುಹೋದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರೊಂದಿಗೆ ತೆಂಗಿನ ಗಿಡದೆದರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಸಮಾರಂಭದಲ್ಲಿ ಹಿರೇಮಣಕಟ್ಟಿ ಶ್ರೀಗಳಾದ ವಿಶ್ವರಾಧ್ಯ ಶಿವಾಚಾರ್ಯರು, ಸವಣೂರು ಉಪವಿಭಾಗಾಧಿಕಾರಿ ಹರ್ಷಲ್, ತಹಶೀಲ್ದಾರ ಶಿವಾನಂದ ರಾಣೆ, ನಬಾಡರ್್ ವ್ಯವಸ್ಥಾಪಕ ಮಹದೇವ ಕೀತರ್ಿ, ಪ್ರಗತಿಪರ ರೈತ ಚೆನ್ನಪ್ಪ ಗುದ್ದಿಶೆಟ್ಟರ ಹಾಗೂ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 