ಹಿಂಸಾಚಾರಕ್ಕೆ ತಿರುಗಿದ ರೈತ ಪ್ರತಿಭಟನೆ
Farmer protest turns violent
ಯಮಕನಮರಡಿ, 07 : ಸ್ಥಳೀಯ ಹತ್ತರಗಿ ಟೋಲ್ ನಾಕಾ ಬಳಿ ಬೆಳಗಾವಿ ಜಿಲ್ಲೆಯ ರೈತ ಸಂಘಟನೆಗಳು ಶುಕ್ರವಾರ ಬೆಳಿಗ್ಗೆ 10;00 ಗಂಟೆಗೆ ಸರ್ವಿಸ್ ರಸ್ತೆ ತಡೆದು ಪ್ರತಿಭಟನೆ ಪ್ರಾರಂಭಿಸಿದರು ಆದರೆ ಸರ್ಕಾರದಿಂದ ಯಾವುದೇ ಸ್ಪಂಧನೆ ದೊರೆಯದ ಕಾರಣ ಮುಖ್ಯ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆಗೆ ಇಳಿದರು.ಈ ಮಧ್ಯೆ ಸ್ಥಳೀಯ ಪೊಲೀಸ್ ಠಾಣೆ ಸಿ.ಪಿ.ಐ.ರೈತರನ್ನು ತಡೆಯಲು ಪ್ರಯತ್ನಿಸಿದರು.
ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರಿಗೆ ವಾಗ್ವಾದ ನಡೆಯಿತು. ನಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಕಬ್ಬಿಗೆ ಬೆಂಬಲ ಬೆಲೆ ರೂ.3500 ಗಳನ್ನು ನಿಗದಿಪಡಿಸಬೇಕೆಂದು ಬೃಹತ್ ಪ್ರತಿಭಟನೆ ನಡೆಸಿದರು. ಈ ಕಳೆದ ಎಂಟು ದಿನಗಳಿಂದ ಗುರ್ಲಾಪುರ ಕ್ರಾಸ ಬಳಿ ನಡೆದಿದ್ದ ರೈತರ ಪ್ರತಿಭಟನೆಯು ಇದ್ದು ಅಲ್ಲಿ ಯಾವುದೇ ಸ್ಪಷ್ಟ ಭರವಸೆಗಳು ಸರ್ಕಾರದಿಂದ ಇಡೇರದ ಕಾರಣ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಪ್ರತಿಭಟನೆಗೆ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ರೈತರು ಆಗಮಿಸಿ ರಾಷ್ಟ್ರೀಯ ಹೆದ್ದಾರಿ ತಡೆದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡು ಹತ್ತಾರು ಕಿಲೋ ಮೀಟರ್ ವರೆಗೆ ವಾಹನ ಟ್ರಾಪಿಕ್ ಜಾಮ್ ಆಗಿತ್ತು. ರೈತರ ಪ್ರತಿಭಟನೆಯಲ್ಲಿ ಹಲವಾರು ರೈತಪರ ಸಂಘಟನೆಗಳ ನಾಯಕರು,ಕಾರ್ಯಕರ್ತರು ಮಠಾದೀಶರು ಬಿ.ಜೆ.ಪಿ.ಮುಖಂಡರುಗಳು ಹಾಗೂ ರೈತರು ಭಾಗವಹಿಸಿದ್ದರು.
ರೈತ ಹೋರಾಟದಿಂದ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಕಬ್ಬಿಗೆ ಬೆಂಬಲ ಬೆಲೆ ಸೂಚಿಸದಿದ್ದರೆ ಇದಕ್ಕಿಂತಲೂ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಇದೇ ಸಂದರ್ಭದಲ್ಲಿ ಎಚ್ಚರಿಸಿದರು. ಹೆದ್ದಾರಿ ತಡೆದು ರೈತರ ಪ್ರತಿಭಟನೆ ಮಾಡಿದ್ದು ಸರ್ಕಾರಕ್ಕೆ ತಲೆನೋವಾಗಿದ್ದು ಕೂಡಲೇ ಸರ್ಕಾರ ಕೂಡಲೇ ಪ್ರತಿಭಟನೆನಿರತ ರೈತರ ಮನವೋಲಿಸಿ ಅವರ ಬೇಡಿಕೆಗಳನ್ನು ಇಡೇರಿಸಬೇಕು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 